alex Certify ಆತ್ಮಾಹುತಿ ದಾಳಿ ಬೆದರಿಕೆ ಹಿನ್ನೆಲೆ ಪಾಕಿಸ್ತಾನದಲ್ಲಿ ಶಾಲಾ-ಕಾಲೇಜು ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಾಹುತಿ ದಾಳಿ ಬೆದರಿಕೆ ಹಿನ್ನೆಲೆ ಪಾಕಿಸ್ತಾನದಲ್ಲಿ ಶಾಲಾ-ಕಾಲೇಜು ಬಂದ್

ಇಸ್ಲಾಮಾಭಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ನಲ್ಲಿ ಸೋಮವಾರ, ಜನವರಿ 22 ರಂದು ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು.

ಶಿಕ್ಷಣ ಸಂಸ್ಥೆಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿದೆ. ಇಸ್ಲಾಮಾಬಾದ್ ಪೊಲೀಸರಿಗೆ ಆತ್ಮಹತ್ಯಾ ದಾಳಿಯ ಬೆದರಿಕೆ ಕರೆ ಬಂದಿದೆ ಎಂದು ಇನ್ಸ್‌ ಪೆಕ್ಟರ್ ಇನಾಮುಲ್ಲಾ ಖಾನ್ ತಿಳಿಸಿದ್ದಾರೆ. ಆದರೆ, ಬೆದರಿಕೆ ಹಾಕಿದ ಭಯೋತ್ಪಾದಕ ಸಂಘಟನೆಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಬೆದರಿಕೆಯ ನಡುವೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

ಇಸ್ಲಾಮಾಬಾದ್‌ ನ ಮೂರು ವಿಶ್ವವಿದ್ಯಾನಿಲಯಗಳನ್ನು ಭದ್ರತಾ ಕಾಳಜಿಯಿಂದ ಅನಿರ್ದಿಷ್ಟವಾಗಿ ಮುಚ್ಚಲಾಗಿದೆ. ಭದ್ರತಾ ಏಜೆನ್ಸಿಗಳು ಭಾನುವಾರ ತಡರಾತ್ರಿ ಉಪನಗರಗಳಲ್ಲಿ ಹುಡುಕಾಟ ನಡೆಸಿವೆ. ಬಹ್ರಿಯಾ, ವಾಯು ಮತ್ತು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸೂಚಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪಾಕ್ ನಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಿವೆ. 2023 ರಲ್ಲಿ 789 ಭಯೋತ್ಪಾದಕ ದಾಳಿಗಳು ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ 1,524 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 1,463 ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಈಗಾಗಲೇ ಕಟ್ಟೆಚ್ಚರ ವಹಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...