alex Certify ಇಮ್ರಾನ್ ಖಾನ್ ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್; ನಾಳೆಯೇ ಬಹುಮತ ಸಾಬೀತಿಗೆ ತಾಕೀತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಮ್ರಾನ್ ಖಾನ್ ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್; ನಾಳೆಯೇ ಬಹುಮತ ಸಾಬೀತಿಗೆ ತಾಕೀತು

ಪಾಕಿಸ್ತಾನದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಅಸೆಂಬ್ಲಿಯನ್ನು ಪುನಃಸ್ಥಾಪಿಸಿದ್ದು, ಇಮ್ರಾನ್ ಖಾನ್ ಏಪ್ರಿಲ್ 9 ರಂದು ಅವಿಶ್ವಾಸ ಮತವನ್ನು ಎದುರಿಸಬೇಕಿದೆ. ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವ ಇಮ್ರಾನ್ ಖಾನ್ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಈ ಕ್ರಮ ಅಸಂವಿಧಾನಿಕ ಎಂದು ಹೇಳಿದೆ.

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ಉಪ ವಿಧಾನಸಭಾಧ್ಯಕ್ಷ ಖಾಸಿಂ ಸೂರಿ ಅವರ ನಿರ್ಧಾರವು ‘ಕಾನೂನುಬಾಹಿರ’ ಎಂದು ಐವರು ಸದಸ್ಯರ ಪೀಠವು ಸರ್ವಾನುಮತದಿಂದ ತೀರ್ಪು ನೀಡಿದೆ.

ಏಪ್ರಿಲ್ 9 ರಂದು ಬೆಳಿಗ್ಗೆ 10:30 ಕ್ಕೆ ಮತ್ತೆ ಸಭೆ ಸೇರುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಅವಿಶ್ವಾಸ ಮತವನ್ನು ನಡೆಸದೆ ಅಧಿವೇಶನವನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಮತದಾನವು ಈ ಹಿಂದೆ ಏಪ್ರಿಲ್ 3 ರಂದು ನಡೆಯಲು ನಿರ್ಧರಿಸಲಾಗಿತ್ತು, ಆದರೆ, ಡೆಪ್ಯೂಟಿ ಸ್ಪೀಕರ್ ಅವರು ವಿದೇಶಿ ಪಿತೂರಿ ಯ ಒಳಗೊಳ್ಳುವಿಕೆಯಿಂದಾಗಿ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ, ಉಪಸಭಾಪತಿಯು ಪ್ರಸ್ತಾವನೆಯನ್ನು ವಜಾಗೊಳಿಸಿದ್ದರು.

ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ಸ್ವಲ್ಪ ಸಮಯದ ನಂತರ, ಖಾನ್ ಅಧ್ಯಕ್ಷ ಆರಿಫ್ ಅಲ್ವಿಗೆ ಅಸೆಂಬ್ಲಿ ವಿಸರ್ಜಿಸುವಂತೆ ಸಲಹೆ ನೀಡಿದರು. ಈ ಕ್ರಮದಿಂದಾಗಿ 90 ದಿನಗಳಲ್ಲಿ ಹೊಸ ಚುನಾವಣೆಯ ಅಗತ್ಯವಿದೆ ಎಂದು ಹೇಳಲಾಗಿದ್ದು, ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಇಮ್ರಾನ್ ಖಾನ್ ಗೆ ಮುಖಭಂಗವಾಗಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿಗೆ ನಿಮಿಷಗಳ ಮೊದಲು, ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಸಿಕಂದರ್ ಸುಲ್ತಾನ್ ರಾಜಾ ಅವರು ನ್ಯಾಯಾಲಯಕ್ಕೆ ಆಗಮಿಸಿ 90 ದಿನಗಳಲ್ಲಿ ಹೊಸ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದಾರೆ.

ಆಡಳಿತಾರೂಢ ತೆಹ್ರೀಕ್-ಇ-ಇನ್ಸಾಫ್ ಪಾರ್ಟಿ (ಪಿಟಿಐ) ಯಿಂದ ಹನ್ನೆರಡು ಶಾಸಕರು ಪಕ್ಷಾಂತರಗೊಂಡಿದ್ದಾರೆ. ಪ್ರಮುಖ ಮಿತ್ರ ಪಕ್ಷ MQM-P ಸಂಬಂಧವನ್ನು ಕಡಿದುಕೊಳ್ಳುವುದರೊಂದಿಗೆ, ಪ್ರತಿಪಕ್ಷ ಸರ್ಕಾರ ಉರುಳಿಸಲು ಅಗತ್ಯವಿರುವ 172 ಕ್ಕೂ ಹೆಚ್ಚು ಮತಗಳನ್ನು ಗಳಿಸಲು ಸಜ್ಜಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...