alex Certify BIG NEWS: ಪಾಕ್ ನಲ್ಲಿ 10 ದಿನಗಳಲ್ಲಿ 2 ಪೋಲಿಯೋ ಪ್ರಕರಣ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಾಕ್ ನಲ್ಲಿ 10 ದಿನಗಳಲ್ಲಿ 2 ಪೋಲಿಯೋ ಪ್ರಕರಣ ಪತ್ತೆ

ಪಾಕಿಸ್ತಾನದಲ್ಲಿ ಕೇವಲ 10 ದಿನಗಳಲ್ಲಿ ಎರಡನೇ ಪೋಲಿಯೋ ಪ್ರಕರಣ ದಾಖಲಾಗಿ ಆತಂಕ ಸೃಷ್ಟಿಸಿದೆ.

ಡಾನ್ ವರದಿ ಪ್ರಕಾರ, ಈದ್ ಹಬ್ಬದ ಸಂದರ್ಭದಲ್ಲಿ ಅನಾರೋಗ್ಯವು ಹೆಚ್ಚಾಗುವ ಸಾಧ್ಯತೆ ಇರುವಾಗಲೇ ಈ ಪ್ರಕರಣಗಳು ದಾಖಲಾಗಿರುವುದು ಪಾಕಿಸ್ತಾನದ ಅಧಿಕಾರಿಗಳನ್ನು ಆತಂಕಕ್ಕೀಡು ಮಾಡಿದೆ.

ದೇಹದಲ್ಲಿನ ʼರಕ್ತ ಹೀನತೆʼ ತಡೆಗಟ್ಟುತ್ತೆ ಈ 4 ಬಗೆಯ ಜ್ಯೂಸ್‌

ಈ ಮಧ್ಯೆ, ಉತ್ತರ ವಜೀರಿಸ್ತಾನದ ಎರಡು ವರ್ಷದ ಮಗುವು ವೈಲ್ಡ್ ಪೋಲಿಯೋ ವೈರಸ್(WPV1)ಗೆ ತುತ್ತಾಗಿ ಪಾರ್ಶ್ವವಾಯುವಿಗೆ ಒಳಗಾಗಿದೆ ಎಂದು ಇಸ್ಲಾಮಾಬಾದ್ ನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ನ ರಾಷ್ಟ್ರೀಯ ಪೋಲಿಯೋ ಪ್ರಯೋಗಾಲಯ ತಿಳಿಸಿದೆ.

ಏಪ್ರಿಲ್ ನಲ್ಲಿ 15 ತಿಂಗಳ ಮಗುವು ಪೋಲಿಯೋ ವೈರಸ್ ನಿಂದ ಬಳಲುತ್ತಿರುವುದು ಪತ್ತೆಯಾಗಿದೆ. ವಿಶೇಷವೆಂದರೆ ಎರಡೂ ಪ್ರಕರಣಗಳು ದಾಖಲಾಗಿರುವುದು ವಜಿರಿಸ್ತಾನ ಭಾಗದಲ್ಲಿಯೇ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...