ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯಪಟ್ಟಿದ್ದಾರೆ. ಗುರುವಾರದಂದು ಡೆಮಾಕ್ರೆಟಿಕ್ ಪಕ್ಷದ ಪ್ರಚಾರ ಸಮಿತಿ ಉದ್ದೇಶಿಸುವ ಮಾತನಾಡುವ ವೇಳೆ ಅವರು ಈ ಮಾತು ಹೇಳಿದ್ದಾರೆ.
ಅನ್ಯ ದೇಶಗಳ ಜೊತೆ ಹೊಂದಾಣಿಕೆಗೆ ಪಾಕಿಸ್ತಾನ ಒತ್ತು ನೀಡುತ್ತಿಲ್ಲ. ಜಗತ್ತು ವೇಗವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಪಾಕಿಸ್ತಾನದ ಈ ನಿಲುವು ಆತಂಕಕಾರಿಯಾಗಿದೆ. ಅಲ್ಲದೆ ಆ ದೇಶ ಅಣ್ವಸ್ತ್ರ ಹೊಂದಿರುವುದು ಆತಂಕಕಾರಿಯಾಗಿದೆ ಎಂದಿದ್ದಾರೆ.
ಈ ಹಿಂದೆಯೂ ವಿದೇಶಾಂಗ ನೀತಿ ನಿರೂಪಣೆ ಹಿರಿಯ ಅಧಿಕಾರಿ ಮಾರ್ವಿನ್ ಕಲ್ಬ್, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿಜಯದಿಂದ ಸ್ಪೂರ್ತಿ ಪಡೆದುಕೊಂಡಿರುವ ಜಿಹಾದಿಗಳು, ಪಾಕಿಸ್ತಾನದಲ್ಲೂ ಅಂತಹ ಪ್ರಯತ್ನಕ್ಕೆ ಕೈ ಹಾಕಬಹುದು ಎಂದು ಎಚ್ಚರಿಸಿದ್ದರು. ಅಂತಹ ಸಂದರ್ಭದಲ್ಲಿ ಅಣ್ವಸ್ತ್ರ, ಭಯೋತ್ಪಾದಕರ ಕೈ ಸಿಕ್ಕಿದರೆ ವಿಶ್ವಕ್ಕೆ ಕಂಟಕ ಎಂಬ ಆತಂಕ ಎಲ್ಲ ದೇಶಗಳನ್ನು ಕಾಡುತ್ತಿದೆ.