ಯಾಂತ್ರಿಕ ದೋಷದಿಂದ ಪಾಕಿಸ್ತಾನ ನೌಕಾಪಡೆಯ ಹೆಲಿಕಾಪ್ಟರ್ ಸೋಮವಾರ ನೈಋತ್ಯ ಗ್ವಾದರ್‌ನಗರದಲ್ಲಿ ಪತನಗೊಂಡಿದ್ದು, ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಬಲೂಚಿಸ್ತಾನ್ ಪ್ರಾಂತ್ಯದ ಬಂದರು ನಗರವಾದ ಗ್ವಾದರ್‌ನಲ್ಲಿ ಹೆಲಿಕಾಪ್ಟರ್ ತರಬೇತಿ ಹಾರಾಟದಲ್ಲಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಸೀ ಕಿಂಗ್ ವಿಮಾನವು ಟೇಕಾಫ್ ಸಮಯದಲ್ಲಿ ನೆಲಕ್ಕೆ ಅಪ್ಪಳಿಸಿತು. ಎಂಜಿನ್ ಗೆ ಬೆಂಕಿ ತಗುಲಿದ್ದು, ಹಿಂಭಾಗದ ಬಾಲ ಮರಿದು ಬಿದ್ದಿದೆ. ಅಪಘಾತವು ಪ್ರಾಯಶಃ ತಾಂತ್ರಿಕ ದೋಷದಿಂದಾಗಿ ಸಂಭವಿಸಿದೆ. ಇಬ್ಬರು ಅಧಿಕಾರಿಗಳು ಮತ್ತೊಬ್ಬ ಯೋಧ ಮೃತಪಟ್ಟಿದ್ದಾರೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಬಲೂಚಿಸ್ತಾನದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯ ಸಂದರ್ಭದಲ್ಲಿ ಹೆಲಿಕಾಪ್ಟರ್ ಪತನಗೊಂಡು ಸೇನೆಯ ಉನ್ನತ ಕಮಾಂಡರ್ ಸೇರಿದಂತೆ ಆರು ಸೈನಿಕರು ಸಾವನ್ನಪ್ಪಿದರು.