ಮಾರ್ಚ್ 8, ಪ್ರತಿ ವರ್ಷ ಈ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಇಂತಹ ದಿನವನ್ನು ಹಿಜಾಬ್ ದಿನವಾಗಿ ಘೋಷಿಸಿ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಖದ್ರಿ ತಮ್ಮ ಪ್ರಧಾನಿ ಬಳಿ ಮನವಿ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ಈ ದಿನವನ್ನು ಔರತ್ ಮಾರ್ಚ್(ಹೆಣ್ಣುಮಕ್ಕಳ ಮೆರವಣಿಗೆ)ಗಾಗಿ ಮೀಸಲಿಡಲಾಗುತ್ತದೆ. ಆ ದಿನದಂದು ಮಹಿಳೆಯರು ಒಟ್ಟಾಗಿ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಮೆರವಣಿಗೆ ಮಾಡುತ್ತಾರೆ.
ಇಂತಹ ದಿನವನ್ನು ಹಿಜಾಬ್ ದಿನವಾಗಿ ಘೋಷಿಸಿ ಎಂದು ಸಚಿವರು ಮಾಡಿರುವ ಮನವಿಯನ್ನು ಹಲವರು ವಿರೋಧಿಸಿದ್ದಾರೆ. ಆದರೆ ಹಲವರು ಈ ದಿನವನ್ನು ಹಿಜಾಬ್ ದಿನವನ್ನಾಗಿ ಆಚರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಸ್ತುವಾರಿ ವಿಚಾರದಲ್ಲಿ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಕ್ಷೇತ್ರಕ್ಕೆ ಬಂಪರ್ ಕೊಡುಗೆ
ಇಸ್ಲಾಂ ಸಂಪೂರ್ಣ ಜೀವನ ಸಂಹಿತೆಯನ್ನು ನೀಡುತ್ತದೆ. ಅದಕ್ಕೆ ಪರ್ಯಾಯವಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಹೀಗಾಗಿ ಮುಂಬರುವ ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ, ಔರತ್ ಮಾರ್ಚ್ ಅಥವಾ ಇನ್ಯಾವುದೇ ಗುಂಪು ಮಾರ್ಚ್ 8ರಂದು, ಇಸ್ಲಾಮಿಕ್ ಮೌಲ್ಯಗಳು, ಸಾಮಾಜಿಕ ನಿಯಮಗಳು, ಹಿಜಾಬ್ ಅಥವಾ ಧಾರ್ಮಿಕ ನಮ್ರತೆಯನ್ನು ಅಪಹಾಸ್ಯ ಮಾಡಲು ಅನುಮತಿಸಬಾರದು. ಏಕೆಂದರೆ ಅಂತಹ ಕೃತ್ಯಗಳು ದೇಶದ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಸಚಿವ ಖದ್ರಿ ತಮ್ಮ ವಿನಂತಿ ಪತ್ರದಲ್ಲಿ ಬರೆದಿದ್ದಾರೆ.
ಸಚಿವರ ಈ ಮನವಿಯನ್ನು ಸೆನೆಟರ್ ಶೆರ್ರಿ ರೆಹಮಾನ್ ವಿರೋಧಿಸಿದ್ದು, ಪಾಕಿಸ್ತಾನದಲ್ಲಿ ಹಿಜಾಬ್ ಧರಿಸುವ ಹಕ್ಕು ಅಪಾಯದಲ್ಲಿದೆ ಎಂದು ಏಕೆ ಅನ್ನಿಸುತ್ತದೆ ? ಅವರು ಹಿಜಾಬ್ ದಿನವನ್ನು ಯಾವಾಗ ಬೇಕಾದರೂ ಆಚರಿಸಬಹುದು ಎಂದಿದ್ದಾರೆ. ಈ ಇಡೀ ವಾದ-ವಿವಾದ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.