ತಮ್ಮ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಕುಟುಂಬವೊಂದು ಇದೀಗ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಎಲ್ಲರ ಹೃದಯ ಗೆದ್ದಿದೆ.
ಹೈದರಾಬಾದ್ನ ಕುಟುಂಬವು ಇಸ್ಲಾಮಾಬಾದ್ನಲ್ಲಿ ನಡೆದ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗಿತ್ತು. ಆಗ ಮೊದಲಿಗೆ ಪಾಕಿಸ್ತಾನ ಎನ್ನುವ ಭಯವಿತ್ತಂತೆ. ಆದರೆ ಅಲ್ಲಿಯ ಸ್ಥಳೀಯ ನಿವಾಸಿಯೊಬ್ಬರು ತಮ್ಮನ್ನು ಸ್ವಾಗತಿಸಿ ಹೈದರಾಬಾದಿ ಬಿರಿಯಾನಿ ಪಾರ್ಟಿ ನೀಡಿದರು. ಇದರಿಂದ ನಮಗೆ ಅತೀವ ಸಂತೋಷವಾಗಿ ಪಾಕಿಸ್ತಾನದ ಕುರಿತು ಇದ್ದ ಭಯ ದೂರವಾಯಿತು ಎಂದು ಬರೆದುಕೊಂಡಿದ್ದಾರೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇತಿಶಾಮ್ ಅಲ್ ಹಕ್ ಎನ್ನುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಪಾಕಿಸ್ತಾನವನ್ನು ಹಾಡಿ ಹೊಗಳಿದ್ದಾರೆ.
ನಾವು ಭಾರತದಿಂದ ಬಂದಿದ್ದೇವೆ ಎಂದ ತಕ್ಷಣ ತಾಹಿರ್ ಖಾನ್ ಅವರು ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ ತಮ್ಮೊಂದಿಗೆ ಊಟ ಮಾಡಬೇಕೆಂದು ಒತ್ತಾಯಿಸಿದರು, ನಂತರ ನಮಗೆ ಉತ್ತಮ ಆತಿಥ್ಯ ಮಾಡಿದರು ಎಂದು ವಿಡಿಯೋದಲ್ಲಿ ಇವರು ಹೇಳಿದ್ದಾರೆ.
ಪಾಕಿಸ್ತಾನದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನುಇದು ಹೋಗಲಾಡಿಸುತ್ತದೆ. ಎಲ್ಲಾ ಕಡೆಗಳಲ್ಲಿಯೂ ಕೆಟ್ಟ ಜನರು ಇರುವಂತೆ ಒಳ್ಳೆಯ ಜನರೂ ಇರುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಹಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ.