ಇತ್ತೀಚೆಗೆ ಪಾಕಿಸ್ತಾನದ ಕರಾಚಿ ನಗರದ ಪಂಚತಾರಾ ಹೋಟೆಲ್ ಒಂದರಲ್ಲಿ ನಡೆದ ಕವ್ವಾಲಿ ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೆಲವು ಯುವತಿಯರು ನಿರ್ಭಯವಾಗಿ ಹುಕ್ಕಾ ಸೇದುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ಅನೇಕರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
ಈ ವಿಡಿಯೋದಲ್ಲಿ ಪ್ರಸಿದ್ಧ ಕವ್ವಾಲಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರ ಕವ್ವಾಲಿಯನ್ನು ಆಲಿಸುತ್ತಾ, ಕೆಲವು ಯುವತಿಯರು ಹಿಜಾಬ್ ಅಥವಾ ಬುರ್ಖಾ ಧರಿಸದೆ ಹುಕ್ಕಾ ಮತ್ತು ಸಿಗರೇಟ್ ಸೇವಿಸುತ್ತಿದ್ದಾರೆ. ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶದಲ್ಲಿ ಇದು ಆಘಾತಕಾರಿಯಾಗಿದೆ, ಏಕೆಂದರೆ ಅಲ್ಲಿ ಸಾಮಾನ್ಯವಾಗಿ ಮಹಿಳೆಯರು ಬುರ್ಖಾ ಧರಿಸುವ ಸಂಪ್ರದಾಯವಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಪಾಕಿಸ್ತಾನದ ವಿವಿಧ ವರ್ಗಗಳಲ್ಲಿ ಧಾರ್ಮಿಕ ನಿಯಮಗಳನ್ನು ವಿಭಿನ್ನವಾಗಿ ಅನುಸರಿಸಲಾಗುತ್ತದೆ ಎಂದು ಚರ್ಚಿಸಲು ಪ್ರಾರಂಭಿಸಿದ್ದಾರೆ.
At a qawwali by Rahat Fateh Ali Khan in Pakistan. High society women are living it up without hijab or burka. Islam seems to be in danger only in India, while in Pakistan and elsewhere in the Islamic countries, it is safe. pic.twitter.com/xr1eozuqCK
— Rakesh Krishnan Simha (@ByRakeshSimha) February 15, 2025