ನ್ಯೂಯಾರ್ಕ್: ಪಾಕಿಸ್ತಾನ ವಿರುದ್ಧ ನಡೆದ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 6 ರನ್ ಗಳ ರೋಚಕ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮುಗ್ಗರಿಸಿ 19 ಓವರ್ ಗಳಲ್ಲಿ 119 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಪರ ರಿಷಬ್ ಪಂತ್ 42, ಅಕ್ಷರ್ ಪಟೇಲ್ 20 ರನ್ ಗಳಿಸಿದರು. ಪಾಕಿಸ್ತಾನ ಪರವಾಗಿ ನಾಸೀಂ ಶಹಾ 3, ಮಹಮದ್ ಅಮೀರ್ 2, ಹಾರಿಸ್ ರವೂಫ್ 3 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಮೊಹಮ್ಮದ್ ರಿಜ್ವಾನ್ 31, ಇಮಾದ್ ವಾಸಿಮ್ 15 ರನ್ ಗಳಿಸಿದರು. ಭಾರತದ ಪರ ಜಸ್ ಪ್ರೀತ್ ಬೂಮ್ರಾ 3, ಹಾರ್ದಿಕ್ ಪಾಂಡ್ಯ 2, ಆರ್ಶ್ ದೀಪ್ ಸಿಂಗ್ 1, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
ಇದೇ ಮೊದಲ ಬಾರಿಗೆ ಟಿ20 ಯಲ್ಲಿ ಭಾರತವನ್ನು ಪಾಕಿಸ್ತಾನ ಆಲೌಟ್ ಮಾಡಿದ್ದು, ಆಲ್ ಔಟ್ ಆದ ಹೊರತಾಗಿಯೂ ಭಾರತ ಪಂದ್ಯ ಗೆದ್ದಿದ್ದು ಇದೇ ಮೊದಲು.