ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಪಾಕಿಸ್ತಾನದ ಬಲೋಚ್ ನಿಮಗೆಲ್ಲಾ ನೆನಪಿರಲೆಬೇಕು. ಪಾಕಿಸ್ತಾನದ ಜನರು ಇನ್ನು ಸಾಂಪ್ರದಾಯಿಕ ಮನಸ್ಥಿತಿಯಲ್ಲಿದ್ದಾರೆ ಎಂದು ಹಲವಾರು ಬೋಲ್ಡ್ ಸ್ಟೇಟ್ ಮೆಂಟ್ ಗಳ ಮೂಲಕ ಹೆಸರುವಾಸಿಯಾಗಿದ್ದ ಅಕೆಗೆ ವಿವಿಧೆಡೆಯಿಂದ ಕೊಲೆ ಬೆದರಿಕೆಗಳು ಬರುತ್ತಿದ್ದರೂ ಆಕೆ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಳು.
ಆದರೆ ಅದೊಂದು ದಿನ 26 ವರ್ಷದ ಬಲೋಚ್ ಳನ್ನು ಆಕೆಯ ಸಹೋದರನೆ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಆ ಸಂದರ್ಭದಲ್ಲಿ ಈ ಪ್ರಕರಣ ಇಡೀ ಪಾಕಿಸ್ತಾನದ ಮರ್ಯಾದಗೇಡು ಹತ್ಯೆಯ ಮುಖವನ್ನ ಬಯಲಿಗೆ ಎಳೆದಿತ್ತು.
ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ
ಬಲೋಚ್ ಳ ಸಹೋದರ ಮುಹಮ್ಮದ್ ವಸೀಮ್ ಆಕೆಯನ್ನ ಕೊಂದಿದ್ದಾನೆ ಎಂದು ಸಾಬೀತಾಗಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿದ್ದ. ಅಂದಿನಿಂದ ಆರು ವರ್ಷಗಳ ಕಾಲ ಜೈಲುವಾಸದಲ್ಲಿದ್ದ ಆತ ಈಗ ಸ್ವಾತಂತ್ರ್ಯನಾಗಿದ್ದಾನೆ. ಕಾರಣ ಪಾಕಿಸ್ತಾನದ ಕೋರ್ಟ್ ಆತನನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.