ಪಾಕ್ ಹೈಕಮಿಷನ್ ನಿಂದ ರಾಹುಲ್ ಗಾಂಧಿ ಸೇರಿದಂತೆ ಹಲವರಿಗೆ ಮಾವಿನ ಹಣ್ಣು ಗಿಫ್ಟ್…! 07-08-2024 8:11PM IST / No Comments / Posted In: Latest News, India, Live News ಸೌಹಾರ್ದತೆಯ ಸೂಚಕವಾಗಿ ಪಾಕಿಸ್ತಾನದ ಹೈಕಮಿಷನ್ ಹಲವು ಭಾರತೀಯ ಸಂಸತ್ ಸದಸ್ಯರಿಗೆ ಮಾವಿನ ಹಣ್ಣಿನ ಬುಟ್ಟಿಗಳನ್ನು ಕಳುಹಿಸಿದೆ. ವರದಿಗಳ ಪ್ರಕಾರ ಪಾಕಿಸ್ತಾನದ ಹೈಕಮಿಷನ್‌ನಿಂದ ಮಾವಿನ ಹಣ್ಣುಗಳನ್ನು ಸ್ವೀಕರಿಸಿದವರಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಶಶಿ ತರೂರ್ ಮತ್ತು ಸಮಾಜವಾದಿ ಪಕ್ಷದ ಸಂಸದರಾದ ಮೊಹಿಬ್ಬುಲ್ಲಾ ನದ್ವಿ, ಜಿಯಾ ಉರ್ ರೆಹಮಾನ್, ಅಫ್ಜಲ್ ಅನ್ಸಾರಿ, ಇಕ್ರಾ ಚೌಧರಿ ಮತ್ತು ಕಪಿಲ್ ಸಿಬಲ್ ಸೇರಿದ್ದಾರೆ. ಉಭಯ ದೇಶಗಳ ನಡುವೆ ಮಾವಿನ ರಾಜತಾಂತ್ರಿಕತೆ ಹೊಸದಲ್ಲ. 2015 ರ ಈದ್ ಸಂದರ್ಭದಲ್ಲಿ, ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರ ಪ್ರಮುಖ ನಾಯಕರಿಗೆ 10 ಕೆಜಿ ಮಾವಿನ ಹಣ್ಣನ್ನು ಕಳುಹಿಸಿದ್ದರು. Sources – Pakistan High Commission has sent cartons of mangoes to 7 Indian MPs: Rahul GandhiKapil SibalShashi TharoorMohibbullah NadviZia Ur Rehman BargAfzal AnsariIqra Hasan — Vikas Bhadauria (@vikasbha) August 7, 2024 Reports of Pakistan High commission sending basket of mangoes to multiple Indian members of parliament including Leader of opposition Rahul Gandhi, Shashi Tharoor, Samajwadi party MPs Mohibbullah Nadvi, Zia Ur Rehman Barq, Afzal Ansari, Iqra Choudhary and Kapil Sibal. In 1981,… — Abhinandan Mishra (@mishra_abhi) August 7, 2024