ನೆರೆಯ ರಾಷ್ಟ್ರ ಪಾಕಿಸ್ತಾನದ ಸ್ಥಿತಿ ತುಂಬಾ ಕೆಟ್ಟದಾಗಿದೆ. ಪಾಕಿಸ್ತಾನವು ಪ್ರಸ್ತುತ ಬಡತನದಿಂದ ಕಂಗೆಟ್ಟಿದೆ. ಜನರಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿಲ್ಲ. ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಕೆಲವು ವಿಚಾರಗಳಲ್ಲಿ ಮಾತ್ರ ಪಾಕಿಸ್ತಾನ ಮುಂಚೂಣಿಯಲ್ಲಿದೆ. ವಿಶ್ವದ ಇತರ ರಾಷ್ಟ್ರಗಳನ್ನು ಹಿಂದಿಕ್ಕಿದೆ.
ವಿಶ್ವದ ಎರಡನೇ ಅತಿ ಎತ್ತರದ ಶಿಖರವನ್ನು ಹೊಂದಿರುವ ಏಕೈಕ ದೇಶ ಪಾಕಿಸ್ತಾನ. ಅಲ್ಲಿನ K2, ವಿಶ್ವದ ಎರಡನೇ ಅತಿ ಎತ್ತರದ ಶಿಖರ. ಇದಲ್ಲದೆ ಮೂರು ಅತಿ ಎತ್ತರದ ಪರ್ವತ ಶ್ರೇಣಿಗಳು – ಹಿಂದೂಕುಶ್, ಕಾರಕೋರಂ ಸಹ ಈ ದೇಶದಲ್ಲಿವೆ.
ಪಾಕಿಸ್ತಾನವು ವಿಶ್ವದ ಅತಿದೊಡ್ಡ ಬಂದರನ್ನು ಹೊಂದಿದೆ. ಇದನ್ನು ಗ್ವಾದರ್ ಬಂದರು ಎಂದು ಕರೆಯಲಾಗುತ್ತದೆ. ಈ ಬಂದರನ್ನು ಪಾಕಿಸ್ತಾನ ಮತ್ತು ಚೀನಾ ಬಳಸುತ್ತವೆ.
ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಸುಸಜ್ಜಿತ ರಸ್ತೆ ಪಾಕಿಸ್ತಾನದಲ್ಲೂ ಇದೆ. ಈ ರಸ್ತೆಯನ್ನು ಚೀನಾ-ಪಾಕಿಸ್ತಾನ ಸ್ನೇಹ ಹೆದ್ದಾರಿ ಅಥವಾ ಕಾರಕೋರಂ ಹೆದ್ದಾರಿ ಎಂದೂ ಕರೆಯುತ್ತಾರೆ.
ವಿಶ್ವದ ಅತಿದೊಡ್ಡ ಸ್ವಯಂಸೇವಕ ಆಂಬ್ಯುಲೆನ್ಸ್ ಸೇವೆಯನ್ನು ಪಾಕಿಸ್ತಾನದಲ್ಲಿ ನಡೆಸಲಾಗುತ್ತಿದೆ. ಇದನ್ನು ಈಧಿ ಫೌಂಡೇಶನ್ ನಡೆಸುತ್ತಿದೆ.
ಪ್ರಪಂಚದಾದ್ಯಂತ ಮಾರಾಟವಾಗುವ ಅರ್ಧದಷ್ಟು ಫುಟ್‌ಬಾಲ್‌ಗಳನ್ನು ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ತಯಾರಿಸಲಾಗುತ್ತದೆ. ಕೈಯಿಂದ ಹೊಲಿದ ಫುಟ್‌ಬಾಲ್‌ಗಳನ್ನು ಮಾರಾಟ ಮಾಡುವಲ್ಲಿ ಪಾಕಿಸ್ತಾನವು ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿದೆ.
ವಿಶ್ವದ ಅತಿ ಎತ್ತರದ ಪೋಲೋ ಮೈದಾನವನ್ನು ಹೊಂದಿರುವ ಏಕೈಕ ದೇಶ ಪಾಕಿಸ್ತಾನ. ಇದು ಪಾಕಿಸ್ತಾನದ ಶಾಂಡೂರ್‌ನಲ್ಲಿದೆ.
ಪರಮಾಣು ಶಕ್ತಿ ಹೊಂದಿರುವ ವಿಶ್ವದ ಏಕೈಕ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ.
ವಿಶ್ವದ ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯಿ ಕೂಡ ಮೂಲತಃ ಪಾಕಿಸ್ತಾನದವರು. ಅವರ ಮನೆ ಪಾಕಿಸ್ತಾನದಲ್ಲಿದೆ.
ಸಿಂಧೂ ಕಣಿವೆ ನಾಗರೀಕತೆ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ನಾಗರಿಕತೆಯು ಪಾಕಿಸ್ತಾನದಲ್ಲೇ ಇದೆ.
ವಿಶ್ವದ ಅತಿ ದೊಡ್ಡ ಮಣ್ಣಿನ ಅಣೆಕಟ್ಟು “ತರ್ಬೆಲಾ ಅಣೆಕಟ್ಟು” ಕೂಡ ಪಾಕಿಸ್ತಾನದಲ್ಲಿದೆ.