ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಆಕಾಶಕ್ಕೇರಿದೆ. ಇಮ್ರಾನ್ ಸರ್ಕಾರ ಒಂದೇ ಬಾರಿ ಪೆಟ್ರೋಲ್ ಬೆಲೆಯನ್ನು 5.40 ರೂಪಾಯಿಗೆ ಹೆಚ್ಚಿಸಿದೆ. ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2.54 ರೂಪಾಯಿ ಏರಿಸಿದೆ. ಸೀಮೆಎಣ್ಣೆ ಬೆಲೆಯನ್ನು 1.39 ರೂಪಾಯಿ ಮತ್ತು ಎಲ್‌ಡಿಒ ಬೆಲೆಯನ್ನು 1.27 ರೂಪಾಯಿಗೆ ಹೆಚ್ಚಿಸಿದೆ.
ಇದ್ರ ನಂತ್ರ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 118.09 ರೂಪಾಯಿಯಾಗಿದೆ. ಡೀಸೆಲ್ ಲೀಟರ್‌ಗೆ 116.5 ರೂಪಾಯಿಯಾದ್ರೆ ಸೀಮೆಎಣ್ಣೆ 87.14 ರೂಪಾಯಿ ಮತ್ತು ಎಲ್‌ಡಿಒ 84.67 ರೂಪಾಯಿಯಾಗಿದೆ. ಕಳೆದ ತಿಂಗಳು ಜೂನ್‌ನಲ್ಲಿ ಪೆಟ್ರೋಲ್ ಬೆಲೆ 2.13 ರೂಪಾಯಿ ಮತ್ತು ಡೀಸೆಲ್ ಬೆಲೆ 1.79 ರೂಪಾಯಿ ಹೆಚ್ಚಾಗಿತ್ತು. ಪಾಕಿಸ್ತಾನ ಅನೇಕ ದೇಶಗಳಿಂದ ಸಾಲ ತೆಗೆದುಕೊಂಡಿದೆ. ಅದನ್ನು ತೀರಿಸಲು ಜನರ ಮೇಲೆ ತೈಲ ಹೊರೆ ಹೇರ್ತಿದೆ.
ಇಮ್ರಾನ್ ಖಾನ್ ಸರ್ಕಾರ, ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲವನ್ನು ತೆಗೆದುಕೊಂಡಿದೆ. ಸಾಲ ನೀಡುವಾಗ ಐಎಂಎಫ್ ಷರತ್ತು ವಿಧಿಸಿತ್ತು. ಸರ್ಕಾರ ಸುಧಾರಣೆ ಕಾರ್ಯಗಳನ್ನು ಜಾರಿಗೆ ತಂದು ಸರ್ಕಾರದ ಬೊಕ್ಕಸ ತುಂಬಿಸಬೇಕೆಂದು ಹೇಳಿತ್ತು. ಇದಕ್ಕಾಗಿ ಇಮ್ರಾನ್ ಖಾನ್, ನಯಾ ಪಾಕಿಸ್ತಾನ್ ಕಾರ್ಯಕ್ರಮ ಆರಂಭಿಸಿದ್ದಾರೆ.