
ಪಾಕಿಸ್ತಾನದ ಫುಟ್ಬಾಲ್ ಆಟಗಾರ ಮುಹಮ್ಮದ್ ರಿಯಾಜ್ ಈಗ ಸರ್ಕಾರದ ಕ್ರೀಡಾ ನಿಷೇಧದ ನಡುವೆಯೂ ಬದುಕುಳಿಯಲು ಜಿಲೇಬಿಗಳನ್ನು ಮಾರುತ್ತಿದ್ದಾರೆ.
2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಪರ ಆಡಿದ ಫುಟ್ಬಾಲ್ ಆಟಗಾರ ಮುಹಮ್ಮದ್ ರಿಯಾಜ್ ಈಗ ಹಂಗು(ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ನಗರ)ದಲ್ಲಿ ರಸ್ತೆಬದಿಯ ಅಂಗಡಿಯಲ್ಲಿ ಜಿಲೇಬಿ ಮಾರಾಟ ಮಾಡುತ್ತಿದ್ದಾರೆ.
ಅವರು ಜೀವನ ಸಾಗಿಸಲು ಜಿಲೇಬಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಆಡುವುದರಿಂದ ಹಿಡಿದು ಆರ್ಥಿಕ ಸಂಕಷ್ಟಗಳೊಂದಿಗೆ ಹೋರಾಡುವವರೆಗಿನ ಅವರ ಪ್ರಯಾಣವು ಕ್ರಿಕೆಟ್ ಪ್ರಾಬಲ್ಯ ಹೊಂದಿರುವ ಮತ್ತು ಫುಟ್ಬಾಲ್ ನಿರ್ಲಕ್ಷಿಸಲ್ಪಟ್ಟಿರುವ ಪಾಕಿಸ್ತಾನದಲ್ಲಿ ಫುಟ್ಬಾಲ್ ಆಟಗಾರರ ಜೀವನದ ಕಠೋರ ವಾಸ್ತವದ ಮೇಲೆ ಬೆಳಕು ಚೆಲ್ಲಿದೆ.
ಸರ್ಕಾರವು departmental sports ಮೇಲೆ ನಿಷೇಧ ಹೇರಿದ ನಂತರ 29 ವರ್ಷದ ಕ್ರೀಡಾಪಟುವಿನ ಜೀವನವು ದೊಡ್ಡ ತಿರುವು ಪಡೆದುಕೊಂಡಿತು, ನೂರಾರು ಕ್ರೀಡಾಪಟುಗಳ ಉದ್ಯೋಗ ಮತ್ತು ಆರ್ಥಿಕ ಸ್ಥಿರತೆಯನ್ನು ಕಳೆದುಕೊಳ್ಳುವಂತಾಯಿತು. 2019 ರಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಸರ್ಕಾರದ ಅಡಿಯಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು departmental sports ಪುನಃಸ್ಥಾಪಿಸುವ ಭರವಸೆಗಳನ್ನು ನೀಡಿದ್ದರೂ, ರಿಯಾಜ್ ಮತ್ತು ಇತರ ಅನೇಕರು ಈ ವ್ಯವಸ್ಥೆಯ ಪರಿಣಾಮಗಳನ್ನು ಇನ್ನೂ ಎದುರಿಸುತ್ತಲೇ ಇದ್ದಾರೆ.
ಯಾವುದೇ ಆರ್ಥಿಕ ಬೆಂಬಲ ಮತ್ತು ಫುಟ್‌ಬಾಲ್‌ನಲ್ಲಿ ಸ್ಪಷ್ಟ ಭವಿಷ್ಯವಿಲ್ಲದ ಕಾರಣ, ರಿಯಾಜ್ ಗೆ ತನ್ನ ಕುಟುಂಬವನ್ನು ಪೋಷಿಸಲು ಬೇರೆ ದಾರಿ ಇರಲಿಲ್ಲ. ನಾನು ಜೀವನೋಪಾಯಕ್ಕಾಗಿ ಪ್ರಾಮಾಣಿಕ ಮಾರ್ಗವನ್ನು ಕಂಡುಕೊಳ್ಳಬೇಕಾಗಿತ್ತು, ಅದಕ್ಕಾಗಿಯೇ ನಾನು ಇಲ್ಲಿ ಫುಟ್‌ಬಾಲ್ ಆಡುವ ಬದಲು ಜಿಲೇಬಿಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.