ಪಾಕಿಸ್ತಾನದ ಧ್ವಜ ಕಟ್ಟಿದ್ದ ಎರಡು ಡಜ಼ನ್‌ಗೂ ಹೆಚ್ಚು ಬಲೂನ್ ಗಳನ್ನು ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮೋಟಿಯಾ ಎಂಬ ಹಳ್ಳಿಯೊಂದರ ಗದ್ದೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಹೋರ್ ಹೆಸರಿನೊಂದಿಗೆ ದೂರವಾಣಿ ಸಂಖ್ಯೆಯನ್ನು ಧ್ವಜದ ಮೇಲೆ ಬರೆಯಲಾಗಿದ್ದು, ’ದಿಲ್ ದಿಲ್ ಪಾಕಿಸ್ತಾನ’ ಎಂದು ಅದರ ಮೇಲೆ ಸ್ಟಾಂಪ್ ಹಾಕಲಾಗಿತ್ತು ಎಂದು ಚಬ್ಬೇವಾಲ್ ಪೊಲೀಸ್ ಠಾಣೆಯ ಅಧಿಕಾರಿ, ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಿದೆ. ಈ ಬಲೂನ್ ಗಳಿಗೆ ಗ್ಯಾಸ್ ತುಂಬಿಸಿದ ಕಾರಣ ಅವು ಇಲ್ಲಿವರೆಗೂ ಬಂದಿವೆ ಎಂದು ಶಂಕಿಸಲಾಗಿದೆ.