
ನೆರೆದಿದ್ದ ಜನ ಬಳಸಿದ ಭಾಷೆಯಿಂದಾಗಿ ತಮ್ಮ ತಾಳ್ಮೆ ಕಳೆದುಕೊಂಡ ಹಸನ್ ಅಲಿ, ಅಭಿಮಾನಿಯ ಕಡೆಗೆ ಹೊಡೆಯುವಂತೆ ಹೋಗುತ್ತಾರೆ. ನಂತರ ಸ್ಥಳದಲ್ಲಿದ್ದ ಇತರರು ಅವರನ್ನು ತಡೆಹಿಡಿದರು.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆದ ಟಿ 20 ವಿಶ್ವಕಪ್ 2022 ರ ಸೆಮಿಫೈನಲ್‌ನಲ್ಲಿ ಮ್ಯಾಥ್ಯೂ ವೇಡ್ ಹೊಡೆದ ಬಾಲ್ ಕ್ಯಾಚ್ ಹಿಡಿಯದೇ ಕೈ ಬಿಟ್ಟ ವೇಳೆಯೂ ಪ್ರೇಕ್ಷಕರು ಹಸನ್ ಅಲಿಯನ್ನು ಕೆರಳಿಸಿದ್ದರು.
ಹಸನ್ ಅಲಿ ಯಾವುದೇ ಮೂರು ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿಲ್ಲ. ಅವರು ಯುಎಇಯಲ್ಲಿ ನಡೆದ ಏಷ್ಯಾ ಕಪ್ 2022 ರಲ್ಲಿ ಬದಲಿ ಆಟಗಾರರಾಗಿದ್ದರಷ್ಟೇ, ಆದರೆ ಆಡಲು ಅವಕಾಶ ಸಿಗಲಿಲ್ಲ. ಆಸ್ಟ್ರೇಲಿಯದಲ್ಲಿ ನಡೆದ T20 ವಿಶ್ವಕಪ್‌ಗೂ ಅವರನ್ನು ಆಯ್ಕೆ ಮಾಡಲಿಲ್ಲ.
ಇತ್ತೀಚೆಗೆ, ಹಸನ್ ಅಲಿ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡರು.
https://twitter.com/acharomattuba/status/1599113164762644480?ref_src=twsrc%5Etfw%7Ctwcamp%5Etweetembed%7Ctwterm%5E1599113685472972800%7Ctwgr%5E31b41b1121c30679753d24505456f18634457f0a%7Ctwcon%5Es2_&ref_url=https%3A%2F%2Fwww.indiatoday.in%2Fsports%2Fcricket%2Fstory%2Fwatch-pakistan-fast-bowler-hasan-ali-loses-his-cool-breaks-into-fight-with-local-spectators-2305741-2022-12-06