ಪಾಕಿಸ್ತಾನದ ಕ್ರಿಕೆಟಿಗ 36 ವರ್ಷದ ಶಹಜಾದ್ ಅಜಾಮ್ ರಾಣಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಪಾಕಿಸ್ತಾನದ ಪರ ಮೊದಲ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಶಹಜಾದ್ ಒಟ್ಟು 95 ಮೊದಲ ದರ್ಜೆ ಪಂದ್ಯ, 58 ಲಿಸ್ಟ್ ಎ ಹಾಗೂ 29 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಮೊದಲ ದರ್ಜೆ ಪಂದ್ಯಗಳಲ್ಲಿ 388 ವಿಕೆಟ್ ಗಳನ್ನು ತೆಗೆದುಕೊಂಡಿದ್ದು, ಆದರೆ ಇವರನ್ನು ಪಾಕಿಸ್ತಾನದ ಪರ ಅಂತರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆ ಮಾಡಿಕೊಂಡಿರಲಿಲ್ಲ. ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಇವರು ಇಸ್ಲಾಮಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.
2020 ರಲ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದ ಶಹಜಾದ್ 30 ರನ್ ಬಾರಿಸಿದ್ದರಲ್ಲದೆ ನಾಲ್ಕು ಓವರ್ ಗಳಲ್ಲಿ ಒಂದು ವಿಕೆಟ್ ಪಡೆದುಕೊಂಡಿದ್ದರು. ಶಹಜಾದ್ ನಿಧನಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮಹಮ್ಮದ್ ಹಫೀಜ್ ಸಂತಾಪ ಸೂಚಿಸಿದ್ದಾರೆ.