alex Certify ChatGPT ಸಹಾಯದಿಂದ ಜಾಮೀನು ಅರ್ಜಿ ತೀರ್ಪು; ಪಾಕ್ ಕೋರ್ಟ್‌ ನಿಂದ ನೂತನ ತಂತ್ರಜ್ಞಾನ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ChatGPT ಸಹಾಯದಿಂದ ಜಾಮೀನು ಅರ್ಜಿ ತೀರ್ಪು; ಪಾಕ್ ಕೋರ್ಟ್‌ ನಿಂದ ನೂತನ ತಂತ್ರಜ್ಞಾನ ಬಳಕೆ

ಇದೇ ಮೊದಲ ಬಾರಿಗೆ ಪಾಕಿಸ್ತಾನದ ಪಂಜಾಬ್ ನ ಫಾಲಿಯಾ ಪ್ರದೇಶದ ಸ್ಥಳೀಯ ನ್ಯಾಯಾಲಯವು ಚಾಟ್‌ಜಿಪಿಟಿಯ ಸಹಾಯ ಪಡೆದು ಜಾಮೀನು ಅರ್ಜಿ ತೀರ್ಪನ್ನು ಪ್ರಕಟಿಸಿದೆ.

ಒಂಬತ್ತು ವರ್ಷದ ಬಾಲಕನನ್ನು ಅಪಹರಿಸಿ ಅವನೊಂದಿಗೆ ಅಸಹಜ ಅಪರಾಧ ಎಸಗಲು ಯತ್ನಿಸಿದ ಆರೋಪದ ಮೇಲೆ 13 ವರ್ಷದ ಬಾಲಕನ ಬಂಧನ ಪೂರ್ವ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮುಹಮ್ಮದ್ ಅಮೀರ್ ಮುನೀರ್ ಅವರು ಆದೇಶಿಸಿದರು.

ನ್ಯಾಯಾಧೀಶರು ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ಹಲವಾರು ಕಾನೂನು ನ್ಯೂನ್ಯತೆಗಳ ಕಾರಣ ಆರೋಪಿ ಬಾಲಕನಿಗೆ ನ್ಯಾಯಾಲಯವು ಜಾಮೀನು ನೀಡಿತು. ಆದಾಗ್ಯೂ, ನ್ಯಾಯಾಧೀಶರು ನಂತರ ಪ್ರಯೋಗವಾಗಿ ChatGPT ನಿಂದ ಸಹಾಯ ಪಡೆಯಲು ನಿರ್ಧರಿಸಿದರು.

ಹಲವಾರು ದೇಶಗಳಲ್ಲಿ ಕಾನೂನು ಸಮಾಲೋಚನೆಗಾಗಿ ರೋಬೋಟ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿರುವುದರಿಂದ, ಭವಿಷ್ಯದಲ್ಲಿ ಕಾನೂನು ತನಿಖೆಗಳನ್ನು ಬೆಂಬಲಿಸುವ ಸಾಮರ್ಥ್ಯದ ಬೆಳಕಿನಲ್ಲಿ ಈ ತಂತ್ರಜ್ಞಾನವನ್ನು ಬಳಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಉರ್ದು ನ್ಯೂಸ್ ವರದಿ ಮಾಡಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...