ಬೆಂಗಳೂರು: ಪಾಕಿಸ್ತಾನ ಪ್ರಜೆ ಸೇರಿದಂತೆ ನಾಲ್ವರು ವಿದೇಶಿ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಿದ್ದು, ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಮಾರುವೇಷದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಜಿಗಣಿಯಲ್ಲಿ ಕೆಲ ವರ್ಷಗಳಿಂದ ಹೆಸರು ಬದಲಿಸಿಕೊಂಡು ಪಾಕ್ ಪ್ರಜೆ ಹಾಗೂ ಬಾಂಗ್ಲಾ ಮೂಲದ ಮಹಿಳೆ ಹಾಗೂ ಮಕ್ಕಳು ವಾಸವಾಗಿದ್ದರು. ಅಕ್ರಮವಾಗಿ ವಾಸವಾಗಿದ್ದ ಹಿನ್ನೆಲೆಯಲ್ಲಿ ಜಿಗಣಿ ಪೊಲಿಸರು ನಾಲ್ವರನ್ನು ಬಂಧಿಸಿದ್ದಾರೆ.
ನಕಲಿ ಪಾಸ್ ಪೋರ್ಟ್, ಆಧಾರ್ ಕಾರ್ಡ್ ಮೂಲಕ ಅನಘಾ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ವಿಚಾರಣೆ ವೇಳೆ 6 ವರ್ಷಗಳಿಂದ ವಾಸವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮನೆ ಮಾಲೀಕ ಮನೆ ಖಾಲಿ ಮಾಡಿಸಲು ಮುಂದಾದಾಗ ಮನೆ ಗೋಡೆಯ ಮೇಲಿನ ಬರಹ, ಕೆಲ ಫೋಟೋಗಳು ಅನುಮಾನಕ್ಕೆ ಕಾರಣವಾಗಿತ್ತು. ವಿಚಾರಿಸಿದಾಗ ಪಾಕ್ ಹಾಗೂ ಬಾಂಗ್ಲಾ ಮೂಲದವರು ಎಂದು ತಿಳಿದುಬಂದಿದೆ.
ಪಾಕ್ ಪ್ರಜೆ ರಶೀದ್ ಸಿದ್ದಕಿ ಶಂಕರ್ ಶರ್ಮಾ ಎಂದು ಹೆಸರು ಬದಲಿಸಿಕೊಂಡಿದ್ದರೆ ಪತ್ನಿ ಆಯುಷಾ ಅನಿಫ್ ಆಶಾ ಶರ್ಮಾ ಎಂದು ಬದಲಿಸಿಕೊಂಡಿದ್ದಳು. ಮೊಹಮ್ಮದ್ ಹನಿಫ್ ರಾಮ್ ಬಾಬು ಎಂದು ಹಾಗೂ ರಾಣಿ ಎಂದು ಹೆಸರು ಬದಲಿಸಿಕೊಂಡಿದ್ದರು. ರಶೀದ್ ಸಿದ್ದಕಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.