ಪಾಕಿಸ್ತಾನದ ಕ್ವೆಟ್ಟಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಆಘಾತಕಾರಿ ಘಟನೆಯಲ್ಲಿ, ಮಾಜಿ ಕ್ವೆಟ್ಟಾ ಆಯುಕ್ತ ಇಫ್ತಿಕಾರ್ ಅಹ್ಮದ್ ಅವರ ಪುತ್ರಿ ಸೈಮಾ ಜೊಗೆಜೈ ಅವರು ಸೆರೀನ್ ಏರ್ ವಿಮಾನದಲ್ಲಿ ಏರ್ ಹೋಸ್ಟೆಸ್ ಮೇಲೆ ಹಲ್ಲೆ ನಡೆಸಿದ್ದಾರೆ.
ವರದಿಯ ಪ್ರಕಾರ, ಮಾಜಿ ಆಯುಕ್ತ ಇಫ್ತಿಕಾರ್ ಅಹ್ಮದ್ ಮತ್ತು ಅವರ ಪುತ್ರಿ ಸೈಮಾ ಜೊಗೆಜೈ ಮದ್ಯದ ಅಮಲಿನಲ್ಲಿದ್ದು, ಕ್ವೆಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ಲಾಮಾಬಾದ್‌ಗೆ ಹೊರಟಿದ್ದ ER540 ವಿಮಾನವನ್ನು ಹತ್ತಿದ್ದರು. ವಿಮಾನ ಹತ್ತುವ ಮುನ್ನವೇ ಇಬ್ಬರೂ ಏರ್‌ಲೈನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನ ಟೇಕಾಫ್ ಆಗುವ ಮೊದಲು ಸೀಟ್ ಬೆಲ್ಟ್ ಕಟ್ಟಿಕೊಳ್ಳುವಂತೆ ಸಿಬ್ಬಂದಿ ಸೈಮಾ ಜೊಗೆಜೈಗೆ ಕೇಳಿದಾಗ, ಅವರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾರೆ. ಇದರಿಂದ ಏರ್ ಹೋಸ್ಟೆಸ್ ಮೂಗಿಗೆ ಗಂಭೀರ ಪೆಟ್ಟಾಗಿ ರಕ್ತ ಬಂದಿದೆ ಮತ್ತು ಹಲ್ಲೆಯಿಂದ ಒಂದು ಹಲ್ಲು ಮುರಿದಿದೆ ಎಂದು ಏರ್ ಲೈನ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಗದ್ದಲ ಸೃಷ್ಟಿಯಾಗುತ್ತಿದ್ದಂತೆ ಪೈಲಟ್ ವಿಮಾನದ ಟೇಕಾಫ್ ರದ್ದುಗೊಳಿಸಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಸೈಮಾ ಜೊಗೆಜೈ ಮತ್ತು ಅವರ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ನಂತರ, ಬಲೂಚಿಸ್ತಾನ್ ಆಡಳಿತವು ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಏರ್‌ಲೈನ್ ಆಡಳಿತದ ಮೇಲೆ ಒತ್ತಡ ಹೇರಿದೆ ಎಂದು ವರದಿಯಾಗಿದೆ.
ನಂತರ, ಮಾಜಿ ಆಯುಕ್ತರು ಮತ್ತು ಅವರ ಪುತ್ರಿ ಲಿಖಿತ ಕ್ಷಮೆಯಾಚಿಸಿದ್ದಾರೆ. ಇದಾದ ಬಳಿಕ ಅವರನ್ನು ಯಾವುದೇ ಕಾನೂನು ಕ್ರಮವಿಲ್ಲದೆ ಬಿಡುಗಡೆ ಮಾಡಲಾಗಿದೆ. ಗಾಯಗೊಂಡ ಏರ್ ಹೋಸ್ಟೆಸ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
نجی ائیر لائن کے عملے سے مبینہ بدتمیزی۔
ائیر پورٹ سیکیورٹی فورس کا ایکشن ۔۔
سابق کمشنر اور بیٹی کو حراست میں لے لیا۔ #Commissioner #Airline #Quetta #AirPort #Islamabad #BreakingNews #GTVNews pic.twitter.com/lJ02tVlVEl— GTV News HD (@GTVNewsPk) March 18, 2025
کوئٹہ ٹواسلام آباد سیرین ایئر کی پرواز میں سابق کمشنر کوئٹہ کی بیٹی کاایئرہوسٹس پر حملہ دانت اور ناک توڑ دیاکپتان نے جہاز کارخ موڑ دیا اے ایس ایف کی جانب سے گرفتاری پر کوئٹہ انتظامیہ کمشنرکی دوڑیں لگ گئیں ایئر لائن انتظامیہ کےمطابق سابق کمشنراوراس کی بیٹی سےمعافی نامہ لکھوادیاگیا pic.twitter.com/3E4nYEz8Y1
— Muhammad Zareef (@muhammadzareef_) March 19, 2025
#cabincrew of #SereneAir beaten by allegedly ex Govt office and his daughter hailing from #Baluchistan .#FlightCaptain of the #Islamabadbound flight from #Quetta returned back airport and handed over to security force.Crew admitted to the hospital.@PCAAOfficial @SereneAirPak pic.twitter.com/yfyuOTnw4Y
— Skynewspakistan (@obaidaghajan) March 19, 2025