ಪಂಜಾಬ್ ಪ್ರಾಂತ್ಯದ ಭವಲ್ ನಗರದಲ್ಲಿ ಪಾಕಿಸ್ತಾನ ಸೇನೆಯ ಸೈನಿಕರು ಬುಧವಾರ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸೈನಿಕರು ಪೊಲೀಸರನ್ನು ಥಳಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಮಡ್ರಿಸಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಪೊಲೀಸರು ಸೈನಿಕರೊಬ್ಬರ ಸಹೋದರನಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆ ಠಾಣೆಗೆ ದೌಡಾಯಿಸಿದ ಸೈನಿಕರು ಪೊಲೀಸರನ್ನು ರೈಫಲ್ ಮತ್ತು ಕೋಲುಗಳಿಂದ ಥಳಿಸಲಾಯಿತು.
ಸುಮಾರು ಏಳೆಂಟು ವಾಹನಗಳಲ್ಲಿ ಬಂದ ಸೈನಿಕರ ಗುಂಪು ಪೊಲೀಸ್ ಅಧಿಕಾರಿಯಿಂದ ಕೀಲಿಗಳನ್ನು ಕಸಿದುಕೊಂಡು ಠಾಣೆಗೆ ನುಗ್ಗಿ ಗೊಂದಲ ಸೃಷ್ಟಿಸಿತು. ಅವರು ರೈಫಲ್ ಮತ್ತು ಕೋಲುಗಳಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು, ಸ್ಟೇಷನ್ ಎಸ್ಎಚ್ಒಗೆ ಚಿತ್ರಹಿಂಸೆ ನೀಡಿದರು. ಪೊಲೀಸರನ್ನು ಥಳಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಈದ್ ಪ್ರಾರ್ಥನೆಯ ನಂತರ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಅನೇಕ ಪೊಲೀಸ್ ಅಧಿಕಾರಿಗಳು ಮತ್ತು ಅವರ ಸಹೋದ್ಯೋಗಿಗಳಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆಯು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.