
ಪಾಕಿಸ್ತಾನ ಸೈನ್ಯದ ಇಬ್ಬರು ಮೇಜರ್ ಗಳೂ ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್, ಬಲೂಚಿಸ್ತಾನದಲ್ಲಿ ಪತನಗೊಂಡಿದೆ.
ಈ ಇಬ್ಬರು ಮೇಜರ್ ರ್ಯಾಂಕ್ ಅಧಿಕಾರಿಗಳು ನಾಲ್ಕು ಮಂದಿ ಎಸ್.ಪಿ.ಜಿ. ಕಮಾಂಡೋಗಳ ಜೊತೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಈ ಕುರಿತಂತೆ ಪಾಕಿಸ್ತಾನದ ಪತ್ರಕರ್ತೆ ಮೋನಾ ಖಾನ್ ಟ್ವೀಟ್ ಮಾಡಿದ್ದು, ಹೆಲಿಕಾಪ್ಟರ್ ನಲ್ಲಿದ್ದವರ ಸ್ಥಿತಿಗತಿ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.