ಟಿ20 ವಿಶ್ವಕಪ್ ಸೂಪರ್ 12 ಸುತ್ತಿನ ಪಂದ್ಯದಲ್ಲಿ ಕೆಲ ದಿನಗಳ ಹಿಂದೆ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಪಾಕ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದ ಜಿಂಬಾಬ್ವೆ ತಂಡಕ್ಕೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದ್ದರೆ ಅತ್ತ ಮಿಸ್ಟರ್ ಬೀನ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿ ಮಾಡಿತ್ತು.
ಇದೀಗ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನವು ಹೀನಾಯ ಸೋಲು ಅನುಭವಿಸಿದ ಬಳಿಕ ಪುನಃ ಮಿಸ್ಟರ್ ಬೀನ್ ಮುನ್ನೆಲೆಗೆ ಬಂದಿದ್ದಾನೆ. ಜಿಂಬಾವ್ವೆ ತಂಡವು ಪಾಕಿಸ್ತಾನವನ್ನು ಇದೇ ಬೀನ್ ವಿಷಯವನ್ನು ಇಟ್ಟುಕೊಂಡು ಟ್ರೋಲ್ ಮಾಡಲು ಶುರು ಮಾಡಿದೆ. ಈ ಹಿಂದೆ ಭಾರತ ಮತ್ತು ಈಗ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋತ ಹಿನ್ನೆಲೆಯಲ್ಲಿ ಈ ಟ್ರೋಲ್ ಶುರುವಾಗಿದೆ.
ಅಷ್ಟಕ್ಕೂ ಕ್ರಿಕೆಟ್ ಮಧ್ಯೆ ಮಿಸ್ಟರ್ ಬೀನ್ ಬರಲು ಕಾರಣ ಏನೆಂದರೆ, ಜಿಂಬಾಬ್ವೆ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ಆರಂಭವಾಗುವ ಮುಂಚೆಯೇ ಎರಡೂ ತಂಡಗಳ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದರು. ಹಾಗೆಯೇ ಪಂದ್ಯಕ್ಕೂ ಮೊದಲು, ಪಾಕಿಸ್ತಾನ ತಂಡ ಅಭ್ಯಾಸ ನಡೆಸಿದ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು.
ಈ ಪೋಸ್ಟ್ಗೆ, ಜಿಂಬಾಬ್ವೆಯ ನಗುಗಿ ಚಸೂರ ಎಂಬ ನೆಟ್ಟಿಗ, ಮಿಸ್ಟರ್ ಬೀನ್ ವಿಚಾರವನ್ನು ಮುನ್ನೆಲೆಗೆ ತಂದು ಬಾಬರ್ ಪಡೆಗೆ ಸೋಲು ಖಚಿತ ಎಂಬುದನ್ನು ಪ್ರಸ್ತಾಪಿಸಿದ್ದ.
ಈತ ತನ್ನ ಟ್ವೀಟ್ನಲ್ಲಿ ಜಿಂಬಾಬ್ವೆಯ ಪ್ರಜೆಯಾಗಿ ನಾವು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಒಮ್ಮೆ ನೀವು ನಿಜವಾದ ಮಿಸ್ಟರ್ ಬೀನ್ ಬದಲಿಗೆ ನಕಲಿ ಪಾಕ್ ಬೀನ್ ಅವರನ್ನು ನಮಗೆ ತೋರಿಸಿದ್ದೀರಿ. ನಿಮ್ಮ ಈ ಹಳೆಯ ಲೆಕ್ಕವನ್ನು ನಾಳಿನ ಪಂದ್ಯದಲ್ಲಿ ಚುಕ್ತಾ ಮಾಡುತ್ತೇವೆ. ಸದ್ಯಕ್ಕೆ ನೀವೀಗ, ಮಳೆ ನಿಮ್ಮನ್ನು ಸೋಲಿನಿಂದ ಪಾರು ಮಾಡಲಿ ಎಂದು ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿದ್ದ. ಹೀಗಾಗಿ ಪಾಕ್ ತಂಡ ಈ ಪಂದ್ಯದಲ್ಲಿ ಸೋತ ಬಳಿಕ ಈ ಟ್ವೀಟ್ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಹಾಗೆಯೇ ಹಲವು ನೆಟ್ಟಿಗರು ಇದೇ ಟ್ವೀಟನ್ನು ರೀಪೋಸ್ಟ್ ಮಾಡಿದ್ದರು. ಆ ಬಳಿಕ ‘ಫ್ರಾಡ್ ಪಾಕ್ ಮಿಸ್ಟರ್ ಬೀನ್’ ಸಖತ್ ಟ್ರೆಂಡ್ ಆಗಿದೆ.
ಅಷ್ಟಕ್ಕೂ ಈ ವಿವಾದವನ್ನು ಆರಂಭ ಮಾಡಿದ್ದೇ ಪಾಕಿಸ್ತಾನ. 2016ರಲ್ಲಿ ಪಾಕಿಸ್ತಾನದ ಮಿ.ಬೀನ್ ಎಂದೇ ಖ್ಯಾತರಾದ ಆಸಿಫ್ ಮೊಹಮದ್‌ರನ್ನು ಜಿಂಬಾಬ್ವೆಗೆ ಕಳಿಸಿತ್ತು. ಅಂದಿನಿಂದ ಈ ವಿವಾದ ಪ್ರಾರಂಭವಾಗಿದ್ದವು. ಆದರೆ ಜಿಂಬಾಬ್ವೆಯನ್ನರು ಆತನೇ ನಿಜವಾದ ಮಿ.ಬೀನ್ ಎಂದು ನಂಬಿಕೊಂಡಿದ್ದರು. ಆತನಿಗಾಗಿ ರೋಡ್ ಶೋ ಕೂಡ ನಡೆಸಲಾಗಿತ್ತು. ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿರುವ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಕಲಿ ಮಿ.ಬೀನ್ ನೀಡಿದ್ದ ಕಾರ್ಯಕ್ರಮ ಸಂಪೂರ್ಣವಾಗಿ ಫ್ಲಾಪ್ ಆಗಿತ್ತು. ಇದೀಗ ಜಿಂಬಾವ್ವೆ ತಂಡವು ಪಾಕಿಸ್ತಾನದ ವಿರುದ್ಧ ಟ್ರೋಲ್ ಮಾಡುತ್ತಿದೆ.
https://twitter.com/jaynildave/status/1591072717473996802?ref_src=twsrc%5Etfw%7Ctwcamp%5Etweetembed%7Ctwterm%5E1591072717473996802%7Ctwgr%5E5004121acc086ec74b0f0733d6a5b06f46cc4401%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpak-bean-vs-mr-bean-pakistan-england-are-t20-world-cup-finalists-and-only-this-meme-matters-6358447.html