ಇಸ್ಲಾಮಾಬಾದ್: ಚೀನಾ ಲಸಿಕೆ ಬಳಕೆಗೆ ನೋ ಎಂದಿರುವ ಪಾಕಿಸ್ತಾನ ಬ್ರಿಟನ್ ನ ಆಸ್ಟ್ರಾಜೆನಿಕಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈ ಮೂಲಕ ತನ್ನ ಅತ್ಯಾಪ್ತ ರಾಷ್ಟ್ರ ಚೀನಾದ ಲಸಿಕೆಯನ್ನು ಬಳಸಲು ಪಾಕಿಸ್ತಾನ ಅನುಮತಿ ನೀಡಿದೇ ತಿರಸ್ಕರಿಸಿದೆ.
ಚೀನಾ ಸರ್ಕಾರಿ ಸ್ವಾಮ್ಯದ ಸಿನೋ ಫಾರ್ಮ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯನ್ನು ಬಳಸಲು ಪಾಕಿಸ್ತಾನ ಒಪ್ಪಿಗೆ ನೀಡದೇ ಬ್ರಿಟನ್ ನ ಆಸ್ಟ್ರಾಜೆನಿಕಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಚೀನಾದ ಲಸಿಕೆಯನ್ನು ಪಾಕಿಸ್ತಾನದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿಲ್ಲ. ಆಸ್ಟ್ರಾಜೆನಿಕಾ ಲಸಿಕೆ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ ಎಂದು ಪಾಕ್ ಆರೋಗ್ಯ ಸಚಿವ ಫೈಸಲ್ ಸುಲ್ತಾನ್ ಹೇಳಿದ್ದಾರೆ.