ಹಬ್ಬಗಳಿಗೆ ಅನೇಕರು ಮನೆಗೆ ಬಣ್ಣ ಬಳಿದು ಮನೆ ಸೌಂದರ್ಯ ಹೆಚ್ಚಿ ಸುತ್ತಾರೆ. ಮನೆಗೆ ಬಳಿಯುವ ಬಣ್ಣ ನಮ್ಮ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಬಣ್ಣಕ್ಕೂ ಒಂದೊಂದು ಮಹತ್ವವಿದೆ. ಬಣ್ಣದಲ್ಲಿ ಬದಲಾವಣೆಯಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಹಸಿರು ಬಣ್ಣಕ್ಕೆ ಮಹತ್ವದ ಸ್ಥಾನವಿದೆ. ಹಾಗೆ ಮನಸ್ಸಿಗೆ ಸುಖ, ಶಾಂತಿ ನೀಡಲು ಹಳದಿ ಬಣ್ಣವನ್ನು ಮನೆಯ ಮುಖ್ಯ ಕೋಣೆಗೆ ಹಚ್ಚಿದ್ರೆ ಒಳ್ಳೆಯದು.
ಮನೆಯ ಉತ್ತರ ದಿಕ್ಕು ಆರ್ಥಿಕ ಸಮೃದ್ಧಿಯ ಸಂಕೇತವಾಗಿದೆ. ಧನ ಲಾಭಕ್ಕಾಗಿ ಮನೆಯ ಉತ್ತರ ದಿಕ್ಕಿಗೆ ಹಸಿರು ಬಣ್ಣವನ್ನು ಹಚ್ಚಿ.
ಮನೆಯ ಬಾಗಿಲು, ಕಿಟಕಿಗೆ ಯಾವಾಗ್ಲೂ ಗಾಢವಾದ ಬಣ್ಣವನ್ನು ಹಚ್ಚಿ.
ಈಶಾನ್ಯ ದಿಕ್ಕಿಗೆ ತಿಳಿ ನೀಲಿ ಬಣ್ಣವನ್ನು ಹಚ್ಚಿ. ಪೂರ್ವ ದಿಕ್ಕಿನ ಗೋಡೆಗೆ ಬಿಳಿ ಬಣ್ಣವನ್ನು ಹಚ್ಚಿ. ಆಗ್ನೇಯ ದಿಕ್ಕಿಗೆ ಗುಲಾಬಿ, ಬೆಳ್ಳಿ ಬಣ್ಣವನ್ನು ಹಚ್ಚಿ. ಉತ್ತರ ದಿಕ್ಕಿಗೆ ಹಸಿರು ಬಣ್ಣವನ್ನು ಹಚ್ಚಿ. ವಾಯುವ್ಯ ದಿಕ್ಕಿಗೆ ಬಿಳಿ, ತಿಳಿ ಬೂದಿ ಬಣ್ಣ ಹಚ್ಚಿ. ದಕ್ಷಿಣ ದಿಕ್ಕಿಗೆ ಕೆಂಪು ಮತ್ತು ಹಳದಿ ಬಣ್ಣವನ್ನು ಹಚ್ಚಿ. ಪಶ್ಚಿಮ ದಿಕ್ಕಿಗೆ ನೀಲಿ, ಬಿಳಿ ಬಣ್ಣವನ್ನು ಹಚ್ಚಬೇಕು.