alex Certify ಹೃದಯಾಘಾತದ ಮೊದಲು ದೇಹದ ಈ 5 ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತೆ ನೋವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತದ ಮೊದಲು ದೇಹದ ಈ 5 ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತೆ ನೋವು…!

ಹೃದಯಾಘಾತವು ಪ್ರಪಂಚದಾದ್ಯಂತ ಸಂಭವಿಸುವ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚಿನ ಜನರು ಹೃದಯಾಘಾತವನ್ನು ಹಠಾತ್ ಘಟನೆ ಎಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಈ ಸಂಪೂರ್ಣ ಪ್ರಕ್ರಿಯೆಯು ಸಂಭವಿಸಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಹೃದಯಾಘಾತದ ಮುನ್ಸೂಚನೆಗಳನ್ನು ಗುರುತಿಸುವ ಮೂಲಕ ಸಾವನ್ನು ತಪ್ಪಿಸಬಹುದು.

ಹೃದಯಾಘಾತದ ಅತ್ಯಂತ ಗಂಭೀರವಾದ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇವುಗಳಲ್ಲಿ ಪ್ರಮುಖವಾದದ್ದು ಬೆನ್ನಿನ ಮೇಲ್ಭಾಗದಲ್ಲಿ ನೋವು. ಈ ನೋವು ಸಾಮಾನ್ಯವಾಗಿ ಸಂಭವಿಸುವ ಸ್ಥಳಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬಹುದು.

ದವಡೆಯಲ್ಲಿ ನೋವು

ಹೃದಯಾಘಾತ ಸಂಭವಿಸುವ ಹಲವಾರು ದಿನಗಳ ಮೊದಲೇ ದವಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಹೃದಯಾಘಾತದ ಸಮಯದಲ್ಲಿ ದವಡೆಯ ನೋವು ಅಸಹನೀಯವಾಗಬಹುದು.

ಕುತ್ತಿಗೆ ನೋವು

ಹೃದಯಾಘಾತದ ಆರಂಭಿಕ ಲಕ್ಷಣವೆಂದರೆ ಕುತ್ತಿಗೆ ನೋವು. ದೀರ್ಘಕಾಲದವರೆಗೆ ಕುತ್ತಿಗೆ ನೋವನ್ನು ಅನುಭವಿಸುತ್ತಿದ್ದರೆ ಅದನ್ನು ಅಲಕ್ಷಿಸಬೇಡಿ, ಕೂಡಲೇ ವೈದ್ಯರಿಂದ ಪರೀಕ್ಷಿಸಿಕೊಳ್ಳಿ.

ಭುಜದ ನೋವು

ಹೃದಯದಲ್ಲಿ ತೊಂದರೆಯಾದಾಗ ಭುಜದಲ್ಲಿ ಕೂಡ ನೋವು ಕಾಣಿಸಿಕೊಳ್ಳುತ್ತದೆ. ಕಾರಣವಿಲ್ಲದೇ ಭುಜದಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ಗುರುತಿಸುವುದು ಮತ್ತು ಪರೀಕ್ಷಿಸಿಕೊಳ್ಳುವುದು ಅವಶ್ಯಕ.

ಬೆನ್ನು ನೋವು

ಹೃದಯಾಘಾತದ ಪ್ರಮುಖ ಲಕ್ಷಣವೆಂದರೆ ದೀರ್ಘಕಾಲದ ಬೆನ್ನು ನೋವು. ಅನೇಕರು ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ಮಲಗುವುದರಿಂದ ಬೆನ್ನುನೋವು ಬಂದಿದೆ ಎಂದುಕೊಳ್ಳುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಇದು ಹೃದಯಾಘಾತಕ್ಕೆ ಸಂಬಂಧಿಸಿರುತ್ತದೆ.

ಎದೆ ನೋವು

ಎದೆ ನೋವು ಹೃದಯಾಘಾತದ ಸಾಮಾನ್ಯ ಚಿಹ್ನೆ. ಇದು ಹೃದಯಾಘಾತದ ಸಮಯದಲ್ಲಿ ಮಾತ್ರವಲ್ಲದೆ ಅದು ಸಂಭವಿಸುವ ಮೊದಲು ಅನೇಕ ಬಾರಿ ಕಾಣಿಸಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...