ನವದೆಹಲಿ: ‘ಪದ್ಮ ಪ್ರಶಸ್ತಿ’ ಗಳಿಗೆ ನಾಮನಿರ್ದೇಶನ ಸಲ್ಲಿಸಲು ಸೆ.15 ಕೊನೆಯ ದಿನಾಂಕವಾಗಿದೆ. ಹೌದು, ಪ್ರತಿಷ್ಠಿತ ಪದ್ಮ ಪ್ರಶಸ್ತಿ 2024 ಕ್ಕೆ ನಾಮನಿರ್ದೇಶನ ಅಥವಾ ಶಿಫಾರಸುಗಳ ಗಡುವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಸೆ.15 ರವಗೆ ವಿಸ್ತರಿಸಿತ್ತು.
ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿರುವ ಪ್ರsಶಸ್ತಿಗಳನ್ನು 2024 ರ ಗಣರಾಜ್ಯೋತ್ಸವದಂದು ಘೋಷಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಅರ್ಹ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡಲಿದೆ.
https://awards.gov.in ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಸಲ್ಲಿಸಬಹುದು. ಈ ಗೌರವಾನ್ವಿತ ಗೌರವಗಳಿಗೆ ಪರಿಗಣಿಸಲು, 800 ಪದಗಳ ಉಲ್ಲೇಖದ ಅಗತ್ಯವಿದೆ. ಈ ಉಲ್ಲೇಖವು ಆಯಾ ಕ್ಷೇತ್ರದಲ್ಲಿ ಶಿಫಾರಸು ಮಾಡಲಾದ ವ್ಯಕ್ತಿಯ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು ಅಥವಾ ಸೇವೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.
1954 ರಲ್ಲಿ ಸ್ಥಾಪನೆಯಾದ ಪದ್ಮ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ಅವುಗಳನ್ನು ಸಾಂಪ್ರದಾಯಿಕವಾಗಿ ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮತ್ತು ಸಾಧನೆಗಳನ್ನು ಗುರುತಿಸುವ ಗುರಿಯನ್ನು ಈ ಪ್ರಶಸ್ತಿಗಳು ಹೊಂದಿವೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ, ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.
..