ಬೆಂಗಳೂರು: ರಾಜ್ಯದಲ್ಲಿ ಜೂನ್ 14 ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದ್ದು, ಸಂಕಷ್ಟದಲ್ಲಿರುವವರಿಗೆ ಎರಡನೇ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
500 ಕೋಟಿ ರೂ, ಪ್ಯಾಕೇಜ್ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ
ಪವರ್ ಲೂಮ್ ನೇಕಾರರಿಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ 3 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ. 59 ಸಾವಿರ ಪವರ್ ಲೂಮ್ ಕಾರ್ಮಿಕರಿಗೆ 35 ಕೋಟಿ ರೂ.
ಚಲನಚಿತ್ರ, ದೂರದರ್ಶನದ ನೋಂದಾಯಿತ ಅಸಂಘಟಿತ ಕಾರ್ಮಿಕರು, ಕಲಾವಿದರು ತಂತ್ರಜ್ಞರಿಗೆ ತಲಾ 3 ಸಾವಿರ ರೂ. ನೀಡಲಿದ್ದು, 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ 3 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 5.6 ಕೋಟಿ ರೂ. ನೀಡಲಾಗುವುದು.
7668 ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ತಲಾ 3 ಸಾವಿರ ರೂ.ನೀಡಲಿದ್ದು, 2.3 ಕೋಟಿ ರೂ. ವೆಚ್ಚವಾಗಲಿದೆ.
ಮೀನುಗಾರರ ಸಂಘಗಳ ಒಳನಾಡು ಮೀನುಗಾರಿಕೆಗೆ ಶೇಕಡ 25 ರಷ್ಟು ರಿಯಾಯಿತಿ ನೀಡಲಾಗುವುದು
ಮುಜರಾಯಿ ದೇವಾಲಯದ ಸಿ ವರ್ಗದ ದೇವಾಲಯಗಳ ಅರ್ಚಕರು, ಅಡುಗೆ ಕೆಲಸದವರುಮತ್ತು ಸಿಬ್ಬಂದಿಗೆ 3 ಸಾವಿರ ರೂ.., 36047 ಜನರಿಗೆ ನೆರವು ನೀಡಲಾಗುವುದು.
ಮಸೀದಿಯ ಮೋಜಿನ್ ಸಿಬ್ಬಂದಿಗೆ ತಲಾ 3 ಸಾವಿರ ರೂ. ನೀಡಲಾಗುವುದು.
ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ನೀಡಲಾಗುವುದು. 42,574 ಮಂದಿಗೆ ನೆರವು
ಅಂಗನವಾಡಿಯ 64,423 ಕಾರ್ಯಕರ್ತೆಯರು, 59,160 ಸಹಾಯಕಿಯರಿಗೆ ತಲಾ 2 ಸಾವಿರ ರೂ.ನೀಡಲಿದ್ದು, ಇದಕ್ಕಾಗಿ 24.07 ಕೋಟಿ ರೂ. ನೀಡಲಾಗುವುದು.
ಶಾಲಾ ಮಕ್ಕಳಿಗೆ ಆಹಾರಧಾನ್ಯದ ಜೊತೆಗೆ ಅರ್ಧ ಕೆಜಿ ಹಾಲಿನ ಪುಡಿ ಜೂನ್, ಜುಲೈ ತಿಂಗಳಲ್ಲಿ ವಿತರಿಸಲಾಗುವುದು. ಇದರಿಂದ ಸರ್ಕಾರಕ್ಕೆ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ.
ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲಾ ಶಾಲಾ ಶಿಕ್ಷಕರಿಗೆ ತಲಾ 5 ಸಾವಿರ ರೂ. ನೀಡಲಾಗುವುದು. ಇದಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ.
ನ್ಯಾಯವಾದಿಗಳ ಕಲ್ಯಾಣನಿಧಿಗೆ 5 ಕೋಟಿ ರೂ. ನೀಡಲಿದ್ದು, ಇದನ್ನು ಅಗತ್ಯವಿರುವ ನ್ಯಾಯವಾದಿಗಳು ಬಳಸಿಕೊಳ್ಳಬಹುದಾಗಿದೆ.
MSME ಕೈಗಾರಿಕೆಗಳಿಗೆ ನೆರವು ನೀಡಲಿದ್ದು, ಮೇ ಮತ್ತು ಜೂನ್ ಮಾಸಿಕ ವಿದ್ಯುತ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸರ್ಕಾರಕ್ಕೆ 114.70 ಕೋಟಿ ರೂ. ಹೊರೆಯಾಗಲಿದೆ.
ಇತರೆ ಕೈಗಾರಿಕೆಗಳಿಗೆ ಮೇ ಮತ್ತು ಜೂನ್ ತಿಂಗಳ ವಿದ್ಯುತ್ ಶುಲ್ಕವನ್ನು ಪಾವತಿಸಲು ಜುಲೈ 30 ರವರೆಗೆ ಮುಂದೂಡಲಾಗಿದೆ. 5.56 ಕೋಟಿ ಹೊರೆಯಾಗಲಿದ್ದು, ಸುಮಾರು 3 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.