ಇತ್ತೀಚೆಗೆ ಓಯೋ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ ಗ್ರಾಹಕರೊಬ್ಬರು ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಹಂಚಿಕೊಂಡಿರುವ ಬಳಕೆದಾರರು, ತಾವು ರೈಲ್ವೆ ನಿಲ್ದಾಣದಲ್ಲಿ ಮಲಗುವಂತಾಯಿತು ಎಂದು ಹೇಳಿದ್ದಾರೆ.
ಬಳಕೆದಾರರ ಪ್ರಕಾರ, ಅವರು ಓಯೋ ಹೋಟೆಲ್ನಲ್ಲಿ ಒಂದು ರಾತ್ರಿಗೆ ರೂಮ್ ಬುಕ್ ಮಾಡಿದ್ದರು. ಆದರೆ, ಹೋಟೆಲ್ ಮ್ಯಾನೇಜರ್ ಮಾಲೀಕರ ಆದೇಶದಂತೆ, ಅವರನ್ನು ಒಂದು ಗಂಟೆಯಲ್ಲೇ ರೂಮ್ನಿಂದ ಹೊರಗೆ ಕಳುಹಿಸಿದ್ದಾರೆ. ಹೆಚ್ಚಿನ ಹಣ ನೀಡಿದರೆ ಮಾತ್ರ ರೂಮ್ನಲ್ಲಿರಲು ಸಾಧ್ಯ ಎಂದು ಮ್ಯಾನೇಜರ್ ಹೇಳಿದ್ದಾರೆನ್ನಲಾಗಿದೆ.
ಗ್ರಾಹಕರು ಓಯೋ ಗ್ರಾಹಕ ಸೇವೆಗೆ ಕರೆ ಮಾಡಿದಾಗ, ಅವರನ್ನು ಬೇರೆ ಹೋಟೆಲ್ಗೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿ ರಿಸೆಪ್ಷನ್ನಲ್ಲಿ ಯಾರೂ ಇರಲಿಲ್ಲ. ಬೇರೆ ಹೋಟೆಲ್ಗಳಿಗೆ ಸ್ಥಳಾಂತರಿಸಿದರೂ ಇದೇ ಪರಿಸ್ಥಿತಿ ಎದುರಾಯಿತು. ಇದರಿಂದ ಬೇಸತ್ತ ಗ್ರಾಹಕರು ಕೊನೆಗೆ ರೈಲ್ವೆ ನಿಲ್ದಾಣದಲ್ಲಿಯೇ ರಾತ್ರಿ ಕಳೆಯುವಂತಾಯಿತು.
ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓಯೋ ಹೋಟೆಲ್ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಯೋ ಹೋಟೆಲ್ನಿಂದ ಇಂತಹ ಅನುಭವಗಳು ತಮಗೂ ಆಗಿವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
View this post on Instagram