
ಉಸಿರಾಡಲು ಆಕ್ಸಿಜನ್ ಹೇಗೆ ತುಂಬಾ ಮುಖ್ಯನೋ ಹಾಗೇ ಚರ್ಮದ ಪೋಷಣೆಗೂ ಆಕ್ಸಿಜನ್ ಅಷ್ಟೇ ಮುಖ್ಯ. ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಹಾಗಾಗಿ ಆಕ್ಸಿಜನ್ ಚರ್ಮವನ್ನು ಹೇಗೆ ಪೋಷಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
*ಆಕ್ಸಿಜನ್ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ಚರ್ಮದ ಮೇಲಿನ ಧೂಳು, ಕೊಳಕು, ಮಾಲಿನ್ಯಗಳು ನಿವಾರಣೆಯಾಗುತ್ತವೆ. ಇದರಿಂದ ಚರ್ಮ ಆರೋಗ್ಯವಾಗಿರುತ್ತದೆ.
*ಹೆಚ್ಚಾಗಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ, ಆಹಾರದಲ್ಲಿನ ಏರಿಳಿತದಿಂದ, ಒತ್ತಡದಿಂದ ಚರ್ಮ ಕೋಶಗಳು ಸಾಯುತ್ತವೆ. ಈ ಚರ್ಮ ಕೋಶಗಳು ಹೊಸದಾಗಿ ಉತ್ಪತ್ತಿಯಾಗಲು ಮತ್ತು ದುರ್ಬಲವಾದ ಚರ್ಮಕೋಶಗಳು ಪುನರ್ ಚೇತನಗೊಳ್ಳಲು ಆಕ್ಸಿಜನ್ ಅತಿ ಅವಶ್ಯಕ.
*ಚರ್ಮದ ಯೌವನವನ್ನು ಕಾಪಾಡಲು ಸಹಾಯಕವಾಗುವ ಪ್ರೋಟೀನ್ ಅಂಶಗಳು ಉತ್ಪಾದನೆಯಾಗಲು ಆಕ್ಸಿಜನ್ ಅತಿ ಅವಶ್ಯಕ. ಆಕ್ಸಿಜನ್ ಸರಿಯಾದ ಪ್ರಮಾಣದಲ್ಲಿ ದೊರೆತರೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.