ಬೆಂಗಳೂರು: ರಾಜ್ಯದಲ್ಲಿ 32 ಆಕ್ಸಿಜನ್ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಾಜ್ಯದ 28 ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.
ಪಿಎಸ್ಎ ಮಾದರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಅನುಮತಿ ನೀಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ರಾಜ್ಯದ 28 ಜಿಲ್ಲೆಗಳಲ್ಲಿ 32 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಿ ಸ್ವಾಮ್ಯದ ಎಂಆರ್ಪಿಎಲ್, ಒಎನ್ಜಿಸಿ, ಎಂಡಿಸಿ ಕಂಪನಿಗಳಿಗೆ ಆದೇಶಿಸಿದ್ದಾರೆ. 34 ಕೋಟಿ ರೂಪಾಯಿ ವೆಚ್ಚದಲ್ಲಿ ಆಕ್ಸಿಜನ್ ಘಟಕಗಳು ಆರಂಭವಾಗಲಿದ್ದು, 1000 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡಲಿರುವ 11 ಘಟಕಗಳನ್ನು ಮೇ 15 ರೊಳಗೆ ಆರಂಭಿಸಲಿದ್ದು, ಜೂನ್ 30 ರೊಳಗೆ ಉಳಿದ ಘಟಕ ಆರಂಭಿಸಲಾಗುವುದು.
ತುಮಕೂರು, ಯಾದಗಿರಿ, ಚಿಕ್ಕಮಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ದಾವಣಗೆರೆ, ಚಾಮರಾಜನಗರ, ಹಾವೇರಿ, ಕೋಲಾರ, ವಿಜಯಪುರ, ಜೇವರ್ಗಿ, ಬಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ನೆಲಮಂಗಲ, ಜಮಖಂಡಿ, ಚಿಕ್ಕೋಡಿ, ಗಂಗಾವತಿ, ಶಿರಸಿ, ಭಟ್ಕಳ, ಗೋಕಾಕ್ ನಲ್ಲಿ ಘಟಕ ಸ್ಥಾಪಿಸಲಾಗುವುದು ಎನ್ನಲಾಗಿದೆ.