ಬೆಂಗಳೂರು: ಮಹಿಳಾ ಸಿಬ್ಬಂದಿ ಪೈಲಟ್ ಮಾಡಿದ ಆಕ್ಸಿಜನ್ ಎಕ್ಸ್ ಪ್ರೆಸ್ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದೆ. ಕೇಂದ್ರ ರೈಲ್ವೇ ಸಚಿವ ಪಿಯುಷ್ ಗೋಯಲ್ ಇದನ್ನು ಶ್ಲಾಘಿಸಿದ್ದಾರೆ.
120 ಮೆಟ್ರಿಕ್ ಟನ್ ಮೆಡಿಕಲ್ ಆಮ್ಲಜನಕ ಹೊತ್ತ ರೈಲು ರಾಜ್ಯಕ್ಕೆ ಆಗಮಿಸಿದ್ದು, ಮಹಿಳಾ ಸಿಬ್ಬಂದಿಗೆ ರೈಲ್ವೆ ಸಚಿವರು ಅಭಿನಂದಿಸಿದ್ದಾರೆ. ಜಾರ್ಖಂಡ್ ನಿಂದ 120 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಸಹಿತ ಎಕ್ಸ್ ಪ್ರೆಸ್ ಬೆಂಗಳೂರು ವೈಟ್ಫೀಲ್ಡ್ ತಲುಪಿದೆ.
ಈ ರೈಲನ್ನು ಇಬ್ಬರು ಮಹಿಳಾ ಲೋಕೋ ಪೈಲೆಟ್ ಗಳು ಚಲಾಯಿಸಿದ್ದಾರೆ. ಮಹಿಳಾ ಸಿಬ್ಬಂದಿ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಚಾಲನೆ ಮಾಡಿದ್ದು, ಸಿರೀಶಾ ಗಜಿನಿ ಮತ್ತು ಅಪರ್ನಾ ಆರ್.ಪಿ. ಅವರು ಈ ರೈಲನ್ನು ಚಾಲನೆ ಮಾಡಿಕೊಂಡು ಬಂದಿದ್ದಾರೆ.