ನೋಯ್ಡಾ (ಉತ್ತರ ಪ್ರದೇಶ): ಕಳೆದ ಕೆಲವು ತಿಂಗಳುಗಳಿಂದ ನೋಯ್ಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನೋಯ್ಡಾ ಪ್ರಾಧಿಕಾರವು ಸಾಕು ನಾಯಿ ಅಥವಾ ಬೆಕ್ಕುಗಳ ಮಾಲೀಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲು ನಿರ್ಧರಿಸಿದೆ. ಬರುವ ಮಾರ್ಚ್ 1ರಿಂದ ಇದು ಜಾರಿಗೆ ಬರಲಿದೆ.
ಬೀದಿ ನಾಯಿಗಳ ಹಾವಳಿ ಮತ್ತು ಸಾಕುಪ್ರಾಣಿಗಳ ದಾಳಿಯ ಸಮಸ್ಯೆಯನ್ನು ಚರ್ಚಿಸಲು ನೋಯ್ಡಾ ಪ್ರಾಧಿಕಾರವು ಮಂಡಳಿಯ ಸಭೆಯನ್ನು ನಡೆಸಿತು. ಸಭೆಯ ನಂತರ, ನೋಯ್ಡಾ ಪ್ರಾಧಿಕಾರವು ಮಾರ್ಚ್ 1, 2023 ರಿಂದ ಸಾಕು ನಾಯಿ ಅಥವಾ ಬೆಕ್ಕಿನಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಮಾಲೀಕರಿಗೆ 10 ಸಾವಿರ ರೂಪಾಯಿ ದಂಡದ ಜತೆಗೆ ಸಂತ್ರಸ್ತರ ಸಂಪೂರ್ಣ ಚಿಕಿತ್ಸೆಯ ಖರ್ಚನ್ನು ಮಾಲೀಕರೇ ಭರಿಸಬೇಕಿದೆ.
ಪ್ರಾಣಿ ಕಲ್ಯಾಣ ಮಂಡಳಿಯ ನಿಯಮಗಳ ಅಡಿಯಲ್ಲಿ, ನೋಯ್ಡಾ ಪ್ರಾಧಿಕಾರವು ನೀತಿಗಳನ್ನು ನಿರ್ಧರಿಸಲು ಸಭೆಯಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಸಹ ನೀಡಿದೆ. ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶವನ್ನು ಹೊರಡಿಸಿದ್ದು, ಇದರ ಅಡಿಯಲ್ಲಿ ಮಾರ್ಚ್ 2023 ರೊಳಗೆ ನೋಯ್ಡಾ ಪ್ರಾಧಿಕಾರದ ಪೆಟ್ ನೋಂದಣಿ ಅಪ್ಲಿಕೇಶನ್ ಮೂಲಕ ಸಾಕು ನಾಯಿಗಳು ಮತ್ತು ಬೆಕ್ಕುಗಳ ನೋಂದಣಿ ಕಡ್ಡಾಯವಾಗಿದೆ. ನೋಂದಣಿಯಾಗದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.