ಕಾಂಗ್ರೆಸ್ ಸರ್ಕಾರದ ಮಹತ್ವದ ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ 2 ನೇ ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ.ಹಣ ಯಾರಿಗೆ ಬಂದಿಲ್ಲ. ಅವರು ಈ ಕೂಡಲೇ ದಾಖಲೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗೆ ತಲುಪಿಸಿ.
ಹೌದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಒಂದು ಕಂತಿನ ಹಣ ಕೂಡ ಪಡೆಯದವರು ತಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ CDPO ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪತ್ರದ ಪ್ರತಿಗಳನ್ನು ಸಲ್ಲಿಸಬೇಕು. ಅಧಿಕಾರಿಗಳ ಬಳಿ ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಇರುವುದರಿಂದ ಅವರು ಏನು ಸಮಸ್ಯೆಯಾಗಿದೆ ಎಂಬುದನ್ನು ಹೇಳುತ್ತಾರೆ. ಹಾಗೇಯೇ ಇದಕ್ಕೆ ಪರಿಹಾರ ಕೂಡ ನೀಡುತ್ತಾರೆ.
ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ. ಈ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಹಣವನ್ನು ಡಿಬಿಟಿ ಮೂಲಕ ನೋಂದಾಯಿತ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.
ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ.