ದಂಡುಪಾಳ್ಯ ಸಿನಿಮಾನ ನೀವು ನೋಡೆ ಇರ್ತೀರಾ. ಇಲ್ಲ ನಿಮಗೆ ದಂಡುಪಾಳ್ಯ ಗ್ಯಾಂಗ್ ಕಥೆ ಗೊತ್ತೇ ಇರುತ್ತದೆ. ಅದ್ರಲ್ಲು ದಂಡುಪಾಳ್ಯ ಸಿನಿಮಾ ರಿಲೀಸ್ ಆದ್ಮೇಲೆ ಇವರ ಕಥೆಗಳು ಸ್ವಲ್ಪ ಹೆಚ್ಚೆ ಪ್ರಚುರವಾಗಿವೆ ಅಂದ್ರೆ ತಪ್ಪಾಗಲ್ಲ. ಇದೆಲ್ಲದರ ಸೈಡ್ಎಫೆಕ್ಟ್ ಅನ್ನೋ ಹಾಗೇ ಆ ಸಂದರ್ಭದಲ್ಲಿ ದಂಡುಪಾಳ್ಯದವರು ಅಂದ್ರೆ ಹೆದರಿಕೊಳ್ಳೋ ಪರಿಸ್ಥಿತಿ ನಿರ್ಮಾಣವಾಗಿದ್ದಂತು ಸತ್ಯ. ಈಗಲೂ ಈ ಭಯ ಹೀಗೆ ಇದೇ ಅನ್ನೋದಕ್ಕೆ ಮತ್ತೊಂದು ನಿದರ್ಶನವೇ ಇತ್ತೀಚಿಗೆ ನಡೆದ ಘಟನೆ.
ಮತ್ತೆ ಮೋಡಿ ಮಾಡಲಿದೆ ಜಿಯೋ…! ಮಾರುಕಟ್ಟೆಗೆ ಬರ್ತಿದೆ ಲ್ಯಾಪ್ ಟಾಪ್
ಬೆಂಗಳೂರಿನ ಮನೆ ಮಾಲೀಕರೊಬ್ಬರು, ದಂಡುಪಾಳ್ಯದವರಿಗೆ ಮನೆ ಬಾಡಿಗೆಗೆ ಕೊಡಬೇಕೊ ಬೇಡವೊ? ಎಂದು ಟ್ವೀಟ್ ಮೂಲಕ ಪೊಲೀಸರ ಸಲಹೆ ಕೇಳಿದ್ದಾರೆ. ಬೆಂಗಳೂರಿನ ಕೃಷ್ಣಮೂರ್ತಿ ಎಂಬ ವ್ಯಕ್ತಿ, ಇತ್ತೀಚೆಗೆ ಓರ್ವ ಬಾಡಿಗೆದಾರ ನನ್ನ ಮನೆಗೆ ಬಾಡಿಗೆಗೆ ಬಂದಿದ್ದಾರೆ. ನಾನು ಅವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ಅವರ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿದೆ. ಈ ಹಳ್ಳಿಯ ಜನರು ಕ್ರೂರವಾಗಿ ಕೊಲೆ ಮಾಡ್ತಾರೆ. ಈ ಕುರಿತು ನಾನು ಚಲನಚಿತ್ರಗಳನ್ನು ನೋಡಿದ್ದೇನೆ. ಈಗ ಅವರಿಗೆ ಮನೆ ಬಾಡಿಗೆ ಕೊಟ್ಟರೆ ಸರಿಯೇ, ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಗರ ಪೊಲೀಸ್ ಆಯುಕ್ತ, DGP ಕರ್ನಾಟಕ, ದಕ್ಷಿಣ ವಿಭಾಗ ಡಿಸಿಪಿಯವ್ರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಪೊಲೀಸ್ ಇಲಾಖೆ, ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ. ಅವರು ನಿಮಗೆ ಸಲಹೆ ನೀಡುತ್ತಾರೆಂದು ಪ್ರತಿಕ್ರಿಯಿಸಿದ್ದಾರೆ.