ಸಂಗ್ರಹಿಸಬಲ್ಲ ಹಳೆ ನಾಣ್ಯಗಳಿಗೆ ಭಾರೀ ಬೇಡಿಕೆ ಇದ್ದು, ಅಪರೂಪದ ನಾಣ್ಯಗಳಿಗೆ ಕಳೆದ ಕೆಲ ತಿಂಗಳುಗಳಿಂದ ವಿಪರೀತ ಡಿಮ್ಯಾಂಡ್ ಇದೆ. ಹಳೆಯ ಅಪರೂಪದ ನಾಣ್ಯಗಳ ಸಂಗ್ರಹಗಾರರಿಗೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಮಾರುವ ಮೂಲಕ ಲಕ್ಷಾಂತರ ರೂಪಾಯಿಗಳು ಜೇಬಿಗೆ ಇಳಿಯುತ್ತಿದೆ. ಉದಾಹರಣೆಗೆ ಒಂದು ರೂ. ಮುಖಬೆಲೆಯ ಈ ವಿಶೇಷ ನಾಣ್ಯ 2.5 ಲಕ್ಷ ರೂ.ಗಳಿಗೆ ಹರಾಜಾಗುವ ಅವಕಾಶವಿದೆ.
ಈ ನಾಣ್ಯವು 1985ನೇ ಇಸವಿಯದ್ದಾಗಿದ್ದು, ಅದರ ಮೇಲೆ H ಗುರುತು ಇರಲಿದೆ. ಕೆಲ ವರ್ಷಗಳ ಹಿಂದೆ ಇಂಥ ನಾಣ್ಯವೊಂದು ಭಾರೀ ಬೆಲೆಗೆ ಹರಾಜಾದ ವರದಿ ಇದೆ. ಹಾಗಾಗಿ, ನೀವು ಇಂಥ ಒಂದು ನಾಣ್ಯದ ಮಾಲೀಕರಾಗಿದ್ದರೆ, ನಿಮ್ಮ ಮನೆಯಲ್ಲೇ ಕುಳಿತು ಅದರಿಂದ ಲಕ್ಷಾಂತರ ರೂಪಾಯಿ ಜೇಬಿಗೆ ಇಳಿಸಬಹುದು.
ತಡರಾತ್ರಿ ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕ ಫಿನಿಶ್
1982ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಮೇಲ್ಕಂಡ ನಾಣ್ಯವನ್ನು 1991ರಲ್ಲಿ ಕೊನೆಯ ಬಾರಿಗೆ ಟಂಕಿಸಲಾಯಿತು. ತುಕ್ಕುರಹಿತ ಉಕ್ಕಿನಿಂದ ಉತ್ಪಾದಿಸಲ್ಪಡುವ ಈ ನಾಣ್ಯಗಳು 4.85 ಗ್ರಾಂ ತೂಕ ಇರಲಿವೆ.
ನಿಮ್ಮಲ್ಲಿ ಈ ನಾಣ್ಯವಿದ್ದಲ್ಲಿ, ಇಂಡಿಯನ್ ಕಾಯಿನ್‌ಮಿಲ್.ಕಾಮ್ ಪೋರ್ಟಲ್‌ಗೆ ಭೇಟಿ ಕೊಟ್ಟು ಮಾರಬಹುದಾಗಿದೆ ಎಂದು ಡಿಎನ್‌ಎನಲ್ಲಿ ವರದಿ ಮಾಡಲಾಗಿದೆ.