ಮಾತಾ ವೈಷ್ಣೋದೇವಿ ಚಿತ್ರ ಮೂಡಿಸಲಾಗಿರುವ 5 ಹಾಗೂ 10 ರೂ.ನ ಈ ನಾಣ್ಯಗಳು ನಿಮ್ಮ ಬಳಿ ಇದೆಯೇ ? ಹಾಗಿದ್ದರೆ ಆನ್‌ಲೈನ್ ಮಾರಾಟ ಮಾಡಿ 10 ಲಕ್ಷ ರೂ. ಗಳಿಸಬಹುದು…!
ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಕೆಲವು ಬಾರಿ ಗೌರವಾರ್ಥವಾಗಿ ಜನಪ್ರಿಯ ಧಾರ್ಮಿಕ ಕ್ಷೇತ್ರಗಳು, ಗಣ್ಯವ್ಯಕ್ತಿಗಳ ಚಿತ್ರ ಮೂಡಿಸಲಾಗಿರುವ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದು ಬಹಳ ಕಡಿಮೆ ಪ್ರಮಾಣದಲ್ಲಿ ಸಮಾಜದಲ್ಲಿ ಚಲಾವಣೆಗೆ ಬರುತ್ತದೆ.
ಷೇರು ಪೇಟೆಗೆ ಲಗ್ಗೆಯಿಟ್ಟ ಪೇಟಿಎಂ, ಖುಷಿಯಿಂದ ಕುಣಿದು ಕುಪ್ಪಳಿಸಿದ ಸಿಇಒ
ಇಂಥ ಅಪರೂಪದ ನಾಣ್ಯಗಳಿಗೆ ಸದ್ಯ ಆನ್‌ಲೈನ್‌ನಲ್ಲಿ ಬಹಳ ಬೇಡಿಕೆ ಹುಟ್ಟಿದೆ. ಅದರಲ್ಲೂ ಮಾತಾ ವೈಷ್ಣೋದೇವಿ ಚಿತ್ರ ಮೂಡಿರುವ ನಾಣ್ಯ ಇದ್ದರೆ, ಆನ್‌ಲೈನ್ ಮಾರಾಟದ ಮೂಲಕ 10 ಲಕ್ಷ ರೂ. ನಿಮ್ಮದಾಗಿಸಿಕೊಳ್ಳಬಹುದು.
2002 ರಲ್ಲಿ ಆರ್.ಬಿ.ಐ. ಬಿಡುಗಡೆ ಮಾಡಿದ ಈ ನಾಣ್ಯವನ್ನು ಬಹಳ ಜನರು ಅದೃಷ್ಟ ನೀಡುವಂಥದ್ದು, ಬಹಳ ಪವಿತ್ರವಾದದ್ದು ಹಾಗೂ ಶುಭಕರ ಎಂದು ನಂಬಿಕೆ ಇರಿಸಿಕೊಂಡಿದ್ದಾರೆ. ಮುಖ್ಯವಾಗಿ 5 ಹಾಗೂ 10 ರೂ. ಮುಖಬೆಲೆಯ ನಾಣ್ಯಗಳು ಮಾತ್ರವೇ ಆರ್.ಬಿ.ಐ.ನಿಂದ ಬಿಡುಗಡೆಗೊಂಡಿದ್ದವು. ಆ ಪೈಕಿ 10 ರೂ.ನದ್ದು ಬಹಳ ಬೇಡಿಕೆಯಲ್ಲಿದೆ.
ʼಬ್ಯಾಂಕ್ ಲಾಕರ್ʼ ಹೊಂದಿರುವವರಿಗೆ ತಪ್ಪದೆ ತಿಳಿದಿರಲಿ ಬದಲಾಗಿರುವ ಈ ನಿಯಮ
ಆನ್‌ಲೈನ್ ಮಾರಾಟ ವೇದಿಕೆಗಳಾದ ಒಎಲ್‌ಎಕ್ಸ್, ಕ್ವಿಕರ್ ಹಾಗೂ ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್‌ನಲ್ಲಿ ವಿಶೇಷ ಸಂದರ್ಭದ ನಾಣ್ಯಗಳು ಮತ್ತು ಅಪರೂಪದ ನಾಣ್ಯಗಳಿಗೆ ಬಹಳ ಬೇಡಿಕೆ ಹುಟ್ಟಿದೆ. ನಾಣ್ಯ ಸಂಗ್ರಹಕಾರರು ದೊಡ್ಡ ಮೌಲ್ಯವನ್ನೇ ನೀಡಿ, ಅಪರೂಪದ ಸಂಗ್ರಹ ನಿರ್ಮಿಸಲು ಮುಂದಾಗುತ್ತಿದ್ದಾರೆ.