alex Certify ಮನಕಲಕುತ್ತೆ ಒಡಹುಟ್ಟಿದ್ದವಳ ಜೀವ ಕಾಪಾಡಲು ಹೋರಾಡಿದ ಸಹೋದರರ ಕತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಒಡಹುಟ್ಟಿದ್ದವಳ ಜೀವ ಕಾಪಾಡಲು ಹೋರಾಡಿದ ಸಹೋದರರ ಕತೆ..!

ಒಡಹುಟ್ಟಿದವರು ತಮ್ಮ ಸಹೋದರ – ಸಹೋದರಿಯರ ಜೀವ ಉಳಿಸಲಿಕ್ಕಾಗಿ ಇನ್ನಿಲ್ಲದ ಹೋರಾಟವನ್ನ ಮಾಡ್ತಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೋವಿಡ್​​ನಿಂದ ಸಹೋದರಿಯನ್ನ ಉಳಿಸೋಕೆ ಇಬ್ಬರು ಸಹೋದರರು ಇನ್ನಿಲ್ಲದ ಹೋರಾಟ ಮಾಡಿದ್ದಾರೆ. ಮೇ 28ರಂದು 47 ವರ್ಷದ ರಿಂಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಈ ವರ್ಷದ ಏಪ್ರಿಲ್​​ ತಿಂಗಳಲ್ಲಿ ಬಿಹಾರದ ಮದಿಪುರದ ಗ್ರಾಮದ ರಿಂಕು ಕೋವಿಡ್​ ಸೋಂಕಿಗೆ ಒಳಗಾಗಿದ್ದಳು. ಆಕೆ ಹಾಗೂ ಆಕೆಯ ಪತಿ ಸತೀಶ್​ ಪ್ರಸಾದ್​​ರನ್ನ ಜೆಎಲ್​ಎನ್​ ಮೆಡಿಕಲ್​ ಕಾಲೇಜು & ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರಿಂಕು ಜನರಲ್​ ವಾರ್ಡ್​ನಲ್ಲೇ ಇರಬೇಕಾಗಿ ಬಂತು.

ಆದರೆ ಆಕೆಯ ಕಿರಿಯ ಸಹೋದರ ರಜನೀಶ್​ ಆಸ್ಪತ್ರೆಗೆ ಬಂದು ಆಕೆಯನ್ನ ಕೋವಿಡ್ ಕೇರ್​ ವಾರ್ಡ್​ಗೆ ಶಿಫ್ಟ್ ಮಾಡಿಸಿದ್ದ. ಆಕೆ ಕೊರೊನಾದ ಗಂಭೀರ ಲಕ್ಷಣ ಹೊಂದಿದ್ದ ವೇಳೆ ರಜನೀಶ್​ ತೆಗೆದುಕೊಂಡ ಈ ನಿರ್ಧಾರ ಬಹಳ ಅಪಾಯಕಾರಿಯಾಗಿತ್ತು.

ರಿಂಕು ಹಾಗೂ ರಜನೀಶ್​ಗೆ ಸ್ಥಳೀಯ ನಿವಾಸಿಯಾದ ಸತೀಶ್​ ಆಹಾರದ ವ್ಯವಸ್ಥೆ ಮಾಡಿದ್ದರು. ಆಕೆಯ ಆಮ್ಲಜನಕ ಮಟ್ಟ 40ಕ್ಕೆ ಇಳಿದಿತ್ತು. ಇದಾದ ಬಳಿಕ ಐಸಿಯುಗೆ ಶಿಫ್ಟ್ ಮಾಡಲಾಯ್ತು. ಈ ವೇಳೆಗಾಗಲೇ ಆಮ್ಲಜನಕ ಮಟ್ಟ 18ಕ್ಕೆ ಇಳಿದಿತ್ತು. ಇದರಿಂದ ಆತಂಕಕ್ಕೆ ಈಡಾದ ರಜನೀಶ್​ ಅಣ್ಣ ರಾಕೇಶ್​ಗೆ ಫೋನಾಯಿಸಿದ್ದ.

ಸುಪ್ರೀಂ ಕೋರ್ಟ್ ವಕೀಲನಾಗಿದ್ದ ರಾಕೇಶ್​ ದೆಹಲಿಯಿಂದ ಪಾಟ್ನಾಗೆ ಆಗಮಿಸಿದ ತನ್ನ ಸಹೋದರಿಯನ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿಸಲು ತೆರಳುತ್ತಿದ್ದ ವೇಳೆ ಆಂಬುಲೆನ್ಸ್ ಹಾಳಾಗಿತ್ತು. ಇದಾದ ಬಳಿಕ ರಿಂಕು ವೆಂಟಿಲೇಷನ್​ನಲ್ಲಿ ಇರಬೇಕಾಗಿ ಬಂತು. ಬರೋಬ್ಬರಿ 53 ದಿನಗಳ ಹೋರಾಟದ ಬಳಿಕ ರಿಂಕು ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...