![](https://kannadadunia.com/wp-content/uploads/2023/05/66bc8394-8702-4aaf-8efe-0d1d47e1dd13.jpg)
ಮೊದಲನೆಯ ಮಗು ಪೋಷಕರ ಜೀವನಕ್ಕೆ ಅಪಾರ ಸಂತೋಷವನ್ನು ತರುತ್ತದೆ. ಹೀಗಾಗಿ ಹೊಸ ಪೋಷಕರು ತಮ್ಮ ಪುಟ್ಟ ಮಗುವಿನ ಪ್ರತಿ ಕ್ಷಣವನ್ನು ಸೆರೆಹಿಡಿಯಲು ಬಯಸುತ್ತಾರೆ. ಇದೀಗ ಇಂಟರ್ನೆಟ್ ಬಳಕೆದಾರರೊಬ್ಬರು, ಇತ್ತೀಚೆಗೆ ತಮ್ಮ 12 ದಿನದ ಮಗುವಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಕ್ಲಿಕ್ಕಿಸಿದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಯೂಟ್ಯೂಬರ್ ಆಗಿರುವ ನಿಖಿಲ್ ಶರ್ಮಾ ಅವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಹೆಣ್ಣು ಮಗುವಿನ ಫೋಟೋ ಕ್ಲಿಕ್ಕಿಸುತ್ತಿರುವ ಕ್ಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಂದೆ ಮಗುವನ್ನು ಬಹಳ ಜಾಗರೂಕತೆಯಿಂದ ಹಿಡಿದುಕೊಂಡಿದ್ದರೆ, ಛಾಯಾಗ್ರಾಹಕ ಫೋಟೋ ಕ್ಲಿಕ್ಕಿಸಿದ್ದಾನೆ. ಕ್ಯಾಮರಾ ಫ್ಲಾಷ್ ಆದಾಗ ಮಗು ಕಣ್ಣು ಮಿಟುಕಿಸಿದೆ.
ನವಜಾತ ಶಿಶುಗಳು ಹೆಚ್ಚಿನ ಸಮಯ ನಿದ್ರಿಸುತ್ತವೆ ಎಂಬ ಕಾರಣದಿಂದ ಫೋಟೋ ಶೂಟ್ ಸುಲಭವಾದ ಕೆಲಸವಾಗಿ ಕಂಡುಬಂದರೂ ಇದು ಅಷ್ಟು ಸುಲಭವಲ್ಲ. ಪಾಸ್ ಪೋರ್ಟ್ ಫೋಟೋ ಕ್ಲಿಕ್ಕಿಸಲು ಗಂಟೆಗಳಷ್ಟು ಸಮಯವನ್ನು ತೆಗೆದುಕೊಂಡಿತು ಎಂದು ಅವರು ಹೇಳಿದ್ದಾರೆ. ಅಂದಹಾಗೆ ಈ ಪೋಸ್ಟ್, 3.9 ಮಿಲಿಯನ್ ವೀಕ್ಷಣೆಗಳು ಮತ್ತು 2.2 ಲಕ್ಷ ಲೈಕ್ಸ್ ಗಳನ್ನು ಸಂಗ್ರಹಿಸಿದೆ.
https://youtu.be/Mpr1c7FsSqI