ಉತ್ತಮ ಆರೋಗ್ಯಕ್ಕೆ ವಿಶ್ರಾಂತಿ ಬಹಳ ಮುಖ್ಯ. ಅದಕ್ಕಾಗಿಯೇ ಆರೋಗ್ಯವಂತ ವಯಸ್ಕರಿಗೆ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನಿದ್ದೆ ದಿನದ ಆಯಾಸವನ್ನು ಹೋಗಲಾಡಿಸುತ್ತದೆ ಮತ್ತು ನೀವು ತಾಜಾತನವನ್ನು ಅನುಭವಿಸುತ್ತೀರಿ. ಕಡಿಮೆ ನಿದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅತಿಯಾದ ನಿದ್ರೆ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು. ಕುಂಭಕರ್ಣನಂತೆ ವಿಪರೀತ ನಿದ್ದೆ ಮಾಡುವುದರಿಂದ ಅನೇಕ ರೀತಿಯ ಅನಾನುಕೂಲಗಳಿವೆ.
ಹೃದಯ ರೋಗ – ಪ್ರತಿದಿನ 8 ಗಂಟೆಗಳ ನಿದ್ದೆ ಅತ್ಯವಶ್ಯ. ಅದರ ನಂತರವೂ ಮಲಗುವುದು ಸೂಕ್ತವಲ್ಲ. 8 ಗಂಟೆಗಳ ಸುಖನಿದ್ದೆ ಬಳಿಕ ಏಳಲು ಅಸಾಧ್ಯವೆನಿಸಿದರೆ ಕುಟುಂಬ ಸದಸ್ಯರ ಸಹಾಯವನ್ನು ಪಡೆದುಕೊಳ್ಳಿ. ಏಕೆಂದರೆ ನೀವು ಹೆಚ್ಚು ಹೊತ್ತು ಮಲಗಿದರೆ ಹೃದಯಕ್ಕೆ ಅದು ಅಪಾಯಕಾರಿ. ಇದು ಪರಿಧಮನಿಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ತಲೆನೋವು – ಸಾಕಷ್ಟು ನಿದ್ದೆ ಮಾಡಿದರೆ ಅದು ಆಯಾಸ ಮತ್ತು ತಲೆನೋವನ್ನು ನಿವಾರಿಸುತ್ತದೆ. ತೃಪ್ತಿಕರ ನಿದ್ದೆಯ ಬಳಿಕವೂ ಮಲಗಿಯೇ ಇದ್ದಲ್ಲಿ ಅದರಿಂದ ತಲೆನೋವು ಬರಬಹುದು. ಆದ್ದರಿಂದ ಈ ಕೆಟ್ಟ ಅಭ್ಯಾಸವನ್ನು ಆದಷ್ಟು ಬೇಗ ಬದಲಾಯಿಸಿಕೊಳ್ಳಿ.
ಖಿನ್ನತೆ – ಕಡಿಮೆ ನಿದ್ರೆ ಮಾಡುವುದು ಒತ್ತಡಕ್ಕೆ ಕಾರಣವಾಗಬಹುದು. ಅದೇ ರೀತಿ ಅತಿಯಾದ ನಿದ್ದೆ ಸಹ ಇಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿದ್ರೆಯನ್ನು ನಿಯಂತ್ರಿಸಲು ಸಾಧ್ಯವಾಗದ ಜನರು ಹೆಚ್ಚಾಗಿ ಖಿನ್ನತೆಗೆ ತುತ್ತಾಗುತ್ತಾರೆ.
ಬೊಜ್ಜು – ಮಿತಿಗಿಂತ ಹೆಚ್ಚು ನಿದ್ದೆ ಮಾಡಿದರೆ ದೈಹಿಕವಾಗಿ ಚಟುವಟಿಕೆಯಿಂದಿರಲು ಸಾಧ್ಯವಾಗುವುದಿಲ್ಲ. ಇದರಿಂದ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಹೆಚ್ಚಾಗುವುದು ಸಹಜ. ಇದು ನಂತರ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.