ವೇದ ಪುರಾಣಗಳಲ್ಲಿ, ಗುರುವಾರ ಹಳದಿ ವಸ್ತುಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ದಿನ ಹಳದಿ ಬಟ್ಟೆಗಳನ್ನು ಧರಿಸುವುದು, ಹಳದಿ ವಸ್ತುಗಳನ್ನು ತಿನ್ನುವುದು ಮತ್ತು ಹಳದಿ ವಸ್ತುಗಳನ್ನು ದಾನ ಮಾಡುವುದು ವ್ಯಕ್ತಿಯ ಜೀವನದಲ್ಲಿ ಗುರುವಿನ ಶುಭ ಪರಿಣಾಮಗಳನ್ನು ನೀಡುತ್ತದೆ. ವಿಷ್ಣು ಸಂತೋಷಗೊಂಡು ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆಂದು ನಂಬಲಾಗಿದೆ.
ಗುರುವಾರ ವಿಷ್ಣುವಿನ ದಿನ. ಲಕ್ಷ್ಮಿಯೊಂದಿಗೆ ವಿಷ್ಣುವಿನ ಪೂಜೆ ಮಾಡಬೇಕು. ಗುರುವಾರ ಸ್ನಾನ ಮಾಡಿ, ಹಳದಿ ಬಣ್ಣದ ಬಟ್ಟೆ ಧರಿಸಬೇಕು. ವಿಷ್ಣು ಮತ್ತು ಲಕ್ಷ್ಮಿ ದೇವಿಯ ಮುಂದೆ ದೀಪವನ್ನು ಹಚ್ಚಬೇಕು. ಬೃಹಸ್ಪತಿ ಕಥೆಯನ್ನು ಆಲಿಸಬೇಕು. ಹೀಗೆ ಮಾಡುವುದರಿಂದ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಸುಧಾರಿಸುತ್ತದೆ. ಮನೆಯಲ್ಲಿ ಕಾಡುವ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
ಗುರುವಾರ, ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ, ಮೂರ್ತಿ ಮುಂದೆ ಕುಂಕುಮ ಮತ್ತು ಒಂದೂವರೆ ಕಿಲೋಗ್ರಾಂನಷ್ಟು ಕಡಲೆ ಕಾಳುಗಳನ್ನು ಹಾಕಿ. ಅಲ್ಲಿ ಕುಳಿತು ವಿಷ್ಣು ಸಹಸ್ರನಾಮ ಪಠಿಸಿ. ಅದರ ನಂತರ ಧಾನ್ಯ ಮತ್ತು ಕುಂಕುಮವನ್ನು ಬಡವರಿಗೆ ದಾನ ಮಾಡಿ. ಇದ್ರಿಂದ ಮನೆಯ ಎಲ್ಲ ಸಮಸ್ಯೆ ಕಡಿಮೆಯಾಗುತ್ತದೆ.
ಮದುವೆಗೆ ವಿಳಂಬವಾಗ್ತಿದ್ದರೆ ಹಸುವಿಗೆ ಕಡಲೆ ಕಾಳು ಹಾಗೂ ಬೆಲ್ಲವನ್ನು ತಿನ್ನಿಸಿ. ಸತತ 11 ಗುರುವಾರ ಹೀಗೆ ಮಾಡಿದಲ್ಲಿ ವಿಷ್ಣು ತೃಪ್ತನಾಗಿ, ಶೀಘ್ರದಲ್ಲಿಯೇ ಶುಭ ಸುದ್ದಿ ನೀಡುತ್ತಾನೆ.