alex Certify ʼಹವಾಮಾನʼ ವೈಪರೀತ್ಯ ಕುರಿತು ಐಪಿಸಿಸಿ ರಿಪೋರ್ಟ್ ನಲ್ಲಿ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹವಾಮಾನʼ ವೈಪರೀತ್ಯ ಕುರಿತು ಐಪಿಸಿಸಿ ರಿಪೋರ್ಟ್ ನಲ್ಲಿ ಮಹತ್ವದ ಮಾಹಿತಿ

ಹವಾಮಾನ ಬದಲಾವಣೆ ಮುಂದಿನ ದಿನಗಳಲ್ಲಿ ಮನುಷ್ಯನ ಉಳಿವಿಗೆ ಮಾರಕವಾಗಲಿದೆ ಎಂದು ಹೇಳಲಾಗಿದೆ‌. ಮುಂದೊಂದು ದಿನ ಹವಾಮಾನ ಬದಲಾವಣೆಯಾದಾಗ ಮನುಷ್ಯ ಹೇಗೆ ನಿಭಾಯಿಸುತ್ತಾನೆ ಎನ್ನುವುದು ಇನ್ನು ಉತ್ತರ ಸಿಗದ ಪ್ರಶ್ನೆ. ಆದರೆ ವಿಜ್ಞಾನಿಗಳು ಈ ಕ್ಲೈಮೇಟ್ ಚೇಂಜ್ ಅನ್ನು ಎದುರಿಸುವುದು ಕಷ್ಟ ಎಂದಿದ್ದಾರೆ.

ಹೌದು, ಜಗತ್ತಿನ 3.6 ಶತಕೋಟಿ ಜನರು ಹವಾಮಾನ ಬದಲಾವಣೆಗೆ ಹೆಚ್ಚು ದುರ್ಬಲರಾಗಿದ್ದಾರೆ ಎಂದು ಯುನೈಟೆಡ್ ನೇಷನ್ ಸೋಮವಾರದಂದು ಬಿಡುಗಡೆ ಮಾಡಿದ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ ವರದಿಯಲ್ಲಿ ತಿಳಿಸಿದೆ.

ಈ ವರದಿಯಲ್ಲಿ, ಹವಾಮಾನ ಬದಲಾವಣೆಯು ಮಾನವ ಪ್ರೇರಿತ ಕ್ರಿಯೆ. ಪ್ರಕೃತಿಯಲ್ಲಿ ಅಪಾಯಕಾರಿ ಮತ್ತು ವ್ಯಾಪಕವಾದ ಅಡಚಣೆಯನ್ನು ಉಂಟುಮಾಡುತ್ತಿದೆ, ಪ್ರಪಂಚದಾದ್ಯಂತದ ಶತಕೋಟಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.

ವಾತಾವರಣದಲ್ಲಾಗುವ ಸಣ್ಣ ಬದಲಾವಣೆಯನ್ನು ಸಹ ತಡೆದುಕೊಳ್ಳಲು ಆಗದ ಹಲವಾರು ಜನರಿದ್ದಾರೆ. ಹೀಗಿರುವಾಗ ಹವಾಮಾನ ಬದಲಾವಣೆಯಾದರೆ, ಇಂತಹ ಕನಿಷ್ಠ ಸಾಮರ್ಥ್ಯವಿರುವ ದುರ್ಬಲವಾಗಿರುವ ಜನರು ಮತ್ತು ಇತರ ಪರಿಸರ ವ್ಯವಸ್ಥೆಗಳು ಹೆಚ್ಚು ಹಾನಿಗೊಳಗಾಗುತ್ತವೆ ಎಂದು ಇತ್ತೀಚಿನ ಇಂಟರ್‌ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (IPCC) ವರದಿಯಲ್ಲಿ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವರದಿಯು ಹವಾಮಾನ ಬದಲಾವಣೆ ಬಗ್ಗೆ ಗಮನ ಕೊಡದೆ ನಿಷ್ಕ್ರಿಯತೆ ತೋರಿಸುತ್ತಿರುವವರಿಗೆ, ಕ್ಲೈಮೇಟ್‌ ಚೇಂಜ್ ಬೀರಬಹುದಾದ ಭೀಕರ ಪರಿಣಾಮಗಳ ಬಗ್ಗೆ ಭೀಕರ ಎಚ್ಚರಿಕೆಯಾಗಿದೆ. ಹವಾಮಾನ ಬದಲಾವಣೆಯು ಇಡೀ ಭೂಮಿಗೆ ಅಪಾಯಕಾರಿ.‌ ಇಂದಿನ ನಮ್ಮ ಕ್ರಿಯೆಗಳು ಮುಂದಿನ ದಿನಗಳನ್ನು ಉತ್ತಮ ಅಥವಾ ಅಪಾಯದ ಸುಳಿವಲ್ಲಿ ಬಿಡುತ್ತವೆ, ಹಾಗಾಗಿ ಪರಿಸರ ಹಾಗೂ ಹವಾಮಾನದ ಬಗ್ಗೆ ಗಮನ ಹರಿಸಬೇಕು ಎಂದು ಹಲವಾರು ತಜ್ಞರು ಹಾಗೂ ಪರಿಸರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...