ರಷ್ಯಾದ 600 ಕ್ಕೂ ಹೆಚ್ಚು ತಜ್ಞರು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ. ಇತರ ಯುರೋಪಿಯನ್ ವಿಶ್ವವಿದ್ಯಾನಿಲಯಗಳು ಮತ್ತು ರಾಷ್ಟ್ರೀಯ ಅಕಾಡೆಮಿಗಳು ಸಹ ರಷ್ಯಾದ ನಿಲುವನ್ನು ಖಂಡಿಸಿ ಉಕ್ರೇನ್ ಜನತೆಗೆ ಹಾಗೂ ನಾಯಕರಿಗೆ ತಮ್ಮ ಬೆಂಬಲ ಸೂಚಿಸಿದ ನಂತರ, ರಷ್ಯಾದ ತಜ್ಞರ ವಲಯದಿಂದ ಇಂತಹದ್ದೊಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಹಿರಂಗ ಪತ್ರಕ್ಕೆ, ರಷ್ಯಾದ ಸಂಶೋಧಕರು, ವಿಜ್ಞಾನಿಗಳು, ತಜ್ಞರು ಸಹಿ ಹಾಕಿದ್ದಾರೆ. ಉಕ್ರೇನ್‌ನ ಮೇಲೆ ಆಕ್ರಮಣ ಮುಂದುವರೆಸಿರುವ ರಷ್ಯಾದ ನಡೆಯನ್ನು ಖಂಡಿಸಿರುವ ಅವರು, ಇದು “ಅನ್ಯಾಯ” ಮತ್ತು “ಪ್ರಜ್ಞಾಶೂನ್ಯ” ಎಂದಿದ್ದಾರೆ.
ನಿಮಗೆ ಗೊತ್ತಾ ʼತುಂಬೆʼ ಗಿಡದ ಪ್ರಯೋಜನಗಳು…..?
ಪತ್ರಕ್ಕೆ ಸಹಿ ಮಾಡಿದವರಲ್ಲಿ ಅನೇಕರಿಗೆ, ಉಕ್ರೇನ್‌ನಲ್ಲಿ ಹಲವು ಸಂಬಂಧಿಕರು, ಸ್ನೇಹಿತರು ಮತ್ತು ಸಹೋದ್ಯೋಗಿಗಳಿದ್ದಾರೆ ಎಂದು ತಿಳಿದು ಬಂದಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾ ಹಾಗೂ ಉಕ್ರೇನ್ ಒಟ್ಟಾಗಿ ಹೋರಾಡಿದ್ದವು. ಅಂತಹ ದೇಶದ ಮೇಲೆ, ಈಗ ರಷ್ಯಾ ದಾಳಿ ನಡೆಸಿತ್ತಿರುವುದು ‘ದ್ರೋಹ’, ಎಂಬುದು ಸಹಿ ಮಾಡಿದವರ ಅಭಿಪ್ರಾಯ.
ಯುದ್ಧ ಮುಂದುವರೆದರೆ ರಷ್ಯಾ, ಅಂತರಾಷ್ಟ್ರೀಯವಾಗಿ ಹಿಂದುಳಿಯುತ್ತದೆ. ಎಂದಿನಂತೆ ದೇಶದಲ್ಲಿ ವೈಜ್ಞಾನಿಕ ಕೆಲಸಗಳನ್ನ ಮುಂದುವರೆಸಲು ಕಷ್ಟವಾಗುತ್ತದೆ. ಇದರಿಂದ ನಮಗೆ ಹಿನ್ನೆಡೆ ಎಂದು ತಜ್ಞ ವಲಯ ಆತಂಕ ವ್ಯಕ್ತಪಡಿಸಿದೆ.