
ನೈಜೀರಿಯಾದ ಚರ್ಚ್ ವೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, 50 ಭಕ್ತರು ಸಾವನ್ನಪ್ಪಿದ್ದಾರೆ. ಓವೊ ನಗರದ ಕ್ಯಾಥೋಲಿಕ್ ಚರ್ಚ್ ವೊಂದರಲ್ಲಿ ಬಂದೂಕುಧಾರಿ ಇಂತಹ ಕೃತ್ಯವೆಸಗಿದ್ದಾನೆ.
ಮೊದಲು ಬಾಂಬ್ ಸ್ಪೋಟಿಸಿದ ದುಷ್ಕರ್ಮಿ ನಂತರ ಗುಂಡಿನ ದಾಳಿ ನಡೆಸಿದ್ದಾನೆ. ಬಾಂಬ್ ಸ್ಪೋಟದಿಂದ ಚರ್ಚ್ ನಲ್ಲಿ ಇದ್ದ ಬಹುತೇಕ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವಾರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.