ಬೆಂಗಳೂರು: ಉಗ್ರ ತಾಲಿಬ್ ಬಂಧನದ ಬೆನ್ನಲ್ಲೇ ಐಎಸ್ಡಿ ಎಚ್ಚರಗೊಂಡಿದ್ದು, ಅಕ್ರಮವಾಗಿ ರಾಜ್ಯದಲ್ಲಿ ವಾಸವಾಗಿರುವ ಬಾಂಗ್ಲಾ ವಲಸಿಗರ ಮೇಲೆ ನಿಗಾವಹಿಸಿದೆ.
ಕರ್ನಾಟಕದಲ್ಲಿ 3 ಲಕ್ಷ ಬಾಂಗ್ಲಾ ವಲಸಿಗರು ಅಕ್ರಮವಾಗಿ ನೆಲೆಸಿದ್ದು, ಅದರಲ್ಲಿಯೂ ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿಯೆ ಸುಮಾರು 2 ಲಕ್ಷ ಜನರು ಇದ್ದಾರೆ ಎಂದು ಐ ಎಸ್ ಡಿ ಮಾಹಿತಿ ಸಂಗ್ರಹಿಸಿ ಸಿಐಬಿಗೆ ನೀಡಿದೆ.
ಈ ವಲಸಿಗರು ಬೇರೆ ಬೇರೆ ರಾಜ್ಯಗಳ ವಿಳಾಸದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದು ನೆಲೆಸಿದ್ದಾರೆ. ಪ್ರತಿವರ್ಷ ಶೇ.10ರಷ್ಟು ಬಾಂಗ್ಲಾ ವಲಸಿಗರು ಹೆಚ್ಚುತ್ತಿದ್ದು, ಅತಿ ಹೆಚ್ಚು ಬಾಂಗ್ಲಾ ವಲಸಿಗರು ನಗರದ ಹೊರವಲಯಗಳಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ.
ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಗ್ಯಾಂಗ್ ನ್ನು ಕೂಡ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಬಾಂಗ್ಲಾ ಪ್ರಜೆಗಳಿಗೆ ಈ ಗ್ಯಾಂಗ್ ಆಧಾರ್ ಕಾರ್ಡ್ ಮಾಡಿಕೊಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.