ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್‌ನಲ್ಲಿ ಇದುವರೆಗೂ ಮೂರು ಕೋಟಿಯಷ್ಟು ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿದ್ದಾರೆ ಎಂದು ತಿಳಿಸಿರುವ ವಿತ್ತ ಸಚಿವಾಲಯವು, 2021-22ರ ವಿತ್ತೀಯ ವರ್ಷದಲ್ಲಿ ತೆರಿಗೆ ರಿಟರ್ನ್ಸ್ ಮಾಡದೇ ಇರುವ ಮಂದಿಗೆ ಈ ಕೆಲಸವನ್ನು ಸಾಧ್ಯವಾದಷ್ಟು ಬೇಗ ಮಾಡಲು ಆಗ್ರಹಿಸಿದೆ.
ದಿನವೊಂದರಲ್ಲಿ ಸರಾಸರಿ 4 ಲಕ್ಷದಷ್ಟು ಐಟಿಆರ್‌ಗಳು ಫೈಲ್ ಆಗುತ್ತಿದ್ದು, ಡೆಡ್ಲೈನ್ ದಿನಾಂಕವಾದ ಡಿಸೆಂಬರ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಿನೇ ದಿನೇ ಫೈಲಿಂಗ್ ಮಾಡುತ್ತಿರುವ ಮಂದಿಯ ಸಂಖ್ಯೆ ಹೆಚ್ಚುತ್ತಿದೆ.
BIG NEWS: ಅಧಿಕಾರಕ್ಕೆ ಬರದಿದ್ರೆ ಜೆಡಿಎಸ್ ಮುಚ್ಚುವೆ: ಹೆಚ್.ಡಿ. ಕುಮಾರಸ್ವಾಮಿ
“ಅಸೆಸ್ಮೆಂಟ್ ವರ್ಷ 2021-22ಕ್ಕೆ ಐಟಿಆರ್ ಫೈಲಿಂಗ್ 3.03 ಕೋಟಿಗೆ ಏರಿದೆ. ಇವರಲ್ಲಿ 58.98% ಐಟಿಆರ್1 (1.78 ಕೋಟಿ), 8% ಐಟಿಆರ್2 (24.42 ಲಕ್ಷ), 8.7%ನಷ್ಟು ಐಟಿಆರ್3 (26.58 ಲಕ್ಷ) 23.12% ಐಟಿಆರ್4 (70.07 ಲಕ್ಷ) ಐಟಿಆರ್5 (2.14 ಲಕ್ಷ) ಐಟಿಆರ್6 (0.91) ಮತ್ತು ಐಟಿಆರ್7 (0.5 ಲಕ್ಷ) ಇದೆ,” ಎಂದು ಸಚಿವಾಲಯ ತಿಳಿಸಿದೆ.
ಈ ಐಟಿಆರ್‌ಗಳ ಪೈಕಿ 52%ನಷ್ಟು ಆನ್ಲೈನ್ ಐಟಿಆರ್ ಅರ್ಜಿಗಳ ಮೂಲಕ ಸಲ್ಲಿಸಲಾಗಿದೆ. ಮಿಕ್ಕವನ್ನು ಆಫ್ಲೈನ್ ಸಾಫ್ಟ್‌ವೇರ್ ಮೂಲಕ ಸೃಷ್ಟಿಸಲಾದ ಅರ್ಜಿಗಳನ್ನು ಐಟಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿ ಸಲ್ಲಿಸಲಾಗಿದೆ.
ಆಧಾರ್-ಓಟಿಪಿ ಹಾಗೂ ಇತರೆ ಕ್ರಿಯೆಗಳ ಮೂಲಕ ಇ-ಪರಿಶೀಲನೆಯ ಪ್ರಕ್ರಿಯೆಯನ್ನು ಬಹಳ ಮುಖ್ಯವಾದದ್ದೆಂದು ತಿಳಿಸಿರುವ ವಿತ್ತ ಸಚಿವಾಲಯ, 2.69 ಕೋಟಿ ರಿಟರ್ನ್ಸ್ ಅನ್ನು ಇ-ಪರಿಶೀಲನೆ ಮಾಡಿದ್ದು, 2.28 ಕೋಟಿಗೂ ಅಧಿಕ ಐಟಿಆರ್‌ಗಳನ್ನು ಆಧಾರ್ ಆಧರಿತ ಓಟಿಪಿ ಮೂಲಕ ಇ-ಪರಿಶೀಲನೆಗೆ ಒಳಪಡಿಲಾಗಿದೆ ಎಂದಿದೆ.