ಸ್ಟಾಕ್ ಹೋಂ: ಸಾಕಷ್ಟು ಮಕ್ಕಳು ಕೋವಿಡ್ -19 ದೀರ್ಘಕಾಲೀನ ಪರಿಣಾಮ ಎದುರಿಸಿ ಗುಣವಾಗಿದ್ದಾರೆ ಎಂಬ ಅಚ್ಚರಿಯ ಅಧ್ಯಯನ ವರದಿಯೊಂದು ಹೊರ ಬಿದ್ದಿದೆ. ಸ್ವೀಡನ್ ನ ಮಕ್ಕಳ ಆಸ್ಪತ್ರೆಯೊಂದರ ಡೇಟಾಗಳನ್ನು ಸ್ವೀಡಿಷ್ ಟೆಲಿವಿಷನ್ (ಎಸ್.ವಿ.ಟಿ.) ಸೋಮವಾರ ಪ್ರಸಾರ ಮಾಡಿದೆ.
ಸ್ವೀಡನ್ ನ ಅಸ್ಟೈಡ್ ಲಿಂಡ್ ಗ್ರೆನ್ಸ್ ಎಂಬ ಮಕ್ಕಳ ಆಸ್ಪತ್ರೆಯಲ್ಲಿ 11ರಿಂದ 13 ವರ್ಷದ 214 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಹಲವರು ಗುಣವಾಗಿ ಶಾಲೆಗಳಿಗೆ ತೆರಳುತ್ತಿದ್ದಾರೆ. ಇನ್ನೂ ಹಲವರಿಗೆ ಸಾಧ್ಯವಾಗಿಲ್ಲ. ಆದರೆ, ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ ಎಂದು ಆಸ್ಪತ್ರೆಯ ಮುಖ್ಯ ಫಿಜೀಶಿಯನ್ ಮಿಲಿನ್ ರೈಡರ್ ಲಿಂಡರ್ ತಿಳಿಸಿದ್ದಾರೆ.
ಎಚ್ಚರ….! ಕಾರ್ ಚಾಲನೆ ವೇಳೆ ಗೂಗಲ್ ಮ್ಯಾಪ್ ಹೀಗೆ ಬಳಸಿದ್ರೆ ಬೀಳುತ್ತೆ ದಂಡ
ಮಕ್ಕಳಿಗೆ ಕೋವಿಡ್ ಸಾಮಾನ್ಯ ಲಕ್ಷಣಗಳು ಗುಣವಾದ ನಂತರವೂ ಮರೆವು, ತಲೆನೋವು ಮುಂತಾದ ತೊಂದರೆಗಳು ಮುಂದುವರಿದಿವೆ. ಆದರೆ, ಇದರ ಬಗ್ಗೆ ಹೆಚ್ಚು ಆತಂಕ ಪಡಬೇಕಿಲ್ಲ. ಎಲ್ಲರೂ ಗುಣಮುಖರಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಕೋವಿಡ್ 19 ಬಂದರೂ ಗಾಬರಿಯಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು ಎಂಬುದನ್ನೂ ತಜ್ಞರು ಹೇಳುತ್ತಾರೆ.