ಕರ್ನಾಟಕ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 2.6 ಲಕ್ಷಕ್ಕೂ ಹೆಚ್ಚು ಮತದಾರರು ನೋಟಾ ಆಯ್ಕೆ ಮಾಡಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಮೇ 10 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ 2.6 ಲಕ್ಷಕ್ಕೂ ಹೆಚ್ಚು ಮತದಾರರು ನೋಟಾ ಆಯ್ಕೆಯನ್ನು ಬಳಸಿದ್ದಾರೆ.
ಮೇ 10ರ ಬುಧವಾರ ಮತ ಚಲಾಯಿಸಲು ಬಂದ ಸುಮಾರು 3.84 ಕೋಟಿ ಜನರಲ್ಲಿ 2,59,278 (ಶೇ. 0.7) ಮಂದಿ ನೋಟಾ ಆಯ್ಕೆಯನ್ನು ಚಲಾಯಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ನೋಟಾ ಆಯ್ಕೆಯನ್ನು 2013 ರಲ್ಲಿ ಪರಿಚಯಿಸಲಾಯಿತು.
ಸೆಪ್ಟೆಂಬರ್ 2013 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗವು ಇವಿಎಂಗಳಲ್ಲಿ ನೋಟಾ ಬಟನ್ ಅನ್ನು ಮತದಾನ ಫಲಕದಲ್ಲಿ ಕೊನೆಯ ಆಯ್ಕೆಯಾಗಿ ಸೇರಿಸಿತ್ತು. ಈ ಬಟನ್ ಒತ್ತುವ ಮೂಲಕ ಮತದಾರರು ತಮಗೆ ಯಾವುದೇ ಅಭ್ಯರ್ಥಿ ಇಷ್ಟವಿಲ್ಲ ಎಂಬುದನ್ನು ಸೂಚಿಸಬಹುದಾಗಿದೆ.