ಮದ್ಯ ನಿಷೇಧವಿರುವ ಬಿಹಾರದಲ್ಲಿ ಸರ್ಕಾರಿ ಕಚೇರಿಯಿಂದ 130 ಕ್ಕೂ ಹೆಚ್ಚು ಕಾರ್ಟನ್‌ಗಳ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, 7 ಮಂದಿ ಬಂಧಿಸಲಾಗಿದೆ.
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಪಾರು ಪ್ರದೇಶದ ಫಂಡಾ ಗ್ರಾಮದ ಸರ್ಕಾರಿ ಕಚೇರಿಯ ಆವರಣದಿಂದ 135 ಕಾರ್ಟನ್‌ಗಳ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮಗೆ ಸುಳಿವು ಸಿಕ್ಕಿದ್ದು, ಅದರ ಅನ್ವಯ ದಾಳಿ ನಡೆಸಲಾಗಿದೆ ಎಂದು ವಶಪಡಿಸಿಕೊಂಡ ಬಗ್ಗೆ ವಿವರಗಳನ್ನು ನೀಡಿದ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಶಿವೇಂದ್ರ ಕುಮಾರ್ ತಿಳಿಸಿದ್ದಾರೆ.
ಸುಳಿವಿನ ಮೇರೆಗೆ ಅಧಿಕಾರಿಗಳು ಪರು ಪ್ರದೇಶದ ಫಂಡಾ ಗ್ರಾಮದ ಸರ್ಕಾರಿ ಕಟ್ಟಡದ ಆವರಣದ ಮೇಲೆ ದಾಳಿ ನಡೆಸಿದ್ದಾರೆ. 135 ಕಾರ್ಟನ್‌ಗಳ ವಿದೇಶಿ ನಿರ್ಮಿತ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ ರಟ್ಟಿನ ಪೆಟ್ಟಿಗೆಗಳನ್ನು ಗೋಣಿ ಚೀಲಗಳಿಂದ ಮುಚ್ಚಲಾಗಿತ್ತು. ಪಂಚಾಯತ್ ಇಲಾಖೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಗ್ರಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಚಿಂತಾಮನ್‌ಪುರ ಪಂಚಾಯತ್‌ನ ‘ಮುಖಿಯ’(ಗ್ರಾಮದ ಮುಖ್ಯಸ್ಥ) ಪತಿ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ. ಬಿಹಾರ ಸರ್ಕಾರವು ಏಪ್ರಿಲ್ 5, 2016 ರಂದು ಇಡೀ ರಾಜ್ಯದಲ್ಲಿ ಮದ್ಯ ನಿಷೇಧಿಸಿದೆ.