alex Certify ಕೋವಿಡ್ ಲಸಿಕೆಗಳ ಅಡ್ಡಪರಿಣಾಮ: ಪರಿಹಾರ ಕೋರಿ 10 ಸಾವಿರಕ್ಕೂ ಅಧಿಕ ಆಸ್ಟ್ರೇಲಿಯನ್ನರ ಅರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆಗಳ ಅಡ್ಡಪರಿಣಾಮ: ಪರಿಹಾರ ಕೋರಿ 10 ಸಾವಿರಕ್ಕೂ ಅಧಿಕ ಆಸ್ಟ್ರೇಲಿಯನ್ನರ ಅರ್ಜಿ

ಕೊರೋನಾ ವೈರಸ್ ವಿರುದ್ಧ ತಮ್ಮ ಮಂದಿಗೆ ಲಸಿಕೆ ನೀಡಲು ದೇಶಗಳು ಬಿರುಸಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಂತೆ, ಆಸ್ಟ್ರೇಲಿಯಾದಲ್ಲಿ ಲಸಿಕೆಯಿಂದ ಉಂಟಾದ ವೈದ್ಯಕೀಯ ಹಾನಿಗಳಿಗೆ ಪರಿಹಾರದ ರೂಪದಲ್ಲಿ ನೀಡಲು ಮಿಲಿಯನ್‌ಗಟ್ಟಲೇ ಡಾಲರ್‌ಗಳನ್ನು ನೀಡಲು ಎದುರುನೋಡುತ್ತಿದೆ.

ಕೋವಿಡ್-19 ಲಸಿಕೆಗಳಿಂದ ಉಂಟಾದ ಅಡ್ಡ ಪರಿಣಾಮಗಳ ಕಾರಣ ಆಸ್ಪತ್ರೆ ಸೇರಿ ಆದಾಯ ಕಳೆದುಕೊಂಡ 10,000 ಕ್ಕೂ ಹೆಚ್ಚಿನ ಮಂದಿ ಪರಿಹಾರ ಪಡೆಯುವ ಸಾಧ್ಯತೆಗಳಿವೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌‌ನ ವರದಿಯೊಂದರಲ್ಲಿ ತಿಳಿಸಲಾಗಿದೆ.

ಲಸಿಕೆಗಳ ಅಡ್ಡಪರಿಣಾಮಗಳನ್ನು ಗುಣಪಡಿಸಲು ಅಗತ್ಯವಿರುವ ವೈದ್ಯಕೀಯ ವೆಚ್ಚ ಹಾಗೂ ಆದಾಯ ಮೂಲ ಕಳೆದುಕೊಂಡದ್ದಕ್ಕೆ ಪರಿಹಾರವಾಗಿ $5,000ಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರತಿಯೊಬ್ಬ ಸಂತ್ರಸ್ತರಿಗೂ ಆಸ್ಟ್ರೇಲಿಯಾ ಸರ್ಕಾರ ನೀಡಬೇಕಿದೆ.

ಆರೋಗ್ಯ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಅತ್ಯವಶ್ಯಕ

ಪ್ರತಿಯೊಬ್ಬ ಸಂತ್ರಸ್ತನಿಗೂ ಪರಿಹಾರ ಕೊಟ್ಟಲ್ಲಿ ಆಸ್ಟ್ರೇಲಿಯಾ ಸರ್ಕಾರದ ಬೊಕ್ಕಸಕ್ಕೆ $37,000 ದಶಲಕ್ಷದಷ್ಟು ಹೊರೆ ಬೀಳಲಿದೆ.

ದೇಶದಲ್ಲಿ ಹಾಕಲಾದ 36.8 ದಶಲಕ್ಷ ಲಸಿಕೆಗಳ ಪೈಕಿ 79,000 ಪ್ರಕರಣಗಳಲ್ಲಿ ಅಡ್ಡ ಪರಿಣಾಮಗಳು ಉಂಟಾದ ವರದಿಯನ್ನು ಆಸ್ಟ್ರೇಲಿಯಾದ ಥೆರಾಪೆಟಿಕ್ ಗೂಡ್ಸ್‌ ಆಡಳಿತ (ಟಿಜಿಎ) ಸ್ವೀಕರಿಸಿದೆ ಎಂದು ಖುದ್ದು ಅದರ ಜಾಲತಾಣದಿಂದ ತಿಳಿದುಬಂದಿದೆ.

ಕೈ ನೋವು, ತಲೆ ನೋವು ಹಾಗೂ ಚಳಿಜ್ವರಗಳು ಅತ್ಯಂತ ಹೆಚ್ಚಾಗಿ ಕಂಡು ಬಂದಿರುವ ಅಡ್ಡ ಪರಿಣಾಮಗಳಾಗಿವೆ.

ಫೈಜ಼ರ್‌ ಹಾಗೂ ಅಸ್ಟ್ರಾಜ಼ೆಂಕಾಗಳು ನೀಡುತ್ತಿರುವ ಲಸಿಕೆಗಳಿಂದಾಗಿ ಹೃದಯ ಸೇರಿದಂತೆ ದೇಹದ ಕೆಲವೊಂದು ಅಂಗಗಳ ಮೇಲೆ ಅಡ್ಡ ಪರಿಣಾಮಗಳು ಉಂಟಾಗಿರುವುದು ಕಂಡುಬಂದಿದ್ದು, ಒಂಬತ್ತು ಮಂದಿ ಮೃತಪಟ್ಟ ವರದಿಗಳೂ ಕೇಳಿ ಬಂದಿವೆ.

ʼಚಳಿಗಾಲʼದ ಕೈಕಾಲು ನೋವಿಗೆ ಇಲ್ಲಿದೆ ಪರಿಹಾರ

ಅಧಿಕೃತ ಅಂಕಿಅಂಶಗಳ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಇದುವರೆಗೂ 3,78,46,128 ಲಸಿಕೆಗಳನ್ನು ನೀಡಲಾಗಿದೆ. 16 ವರ್ಷ ಮೇಲ್ಪಟ್ಟ ಮಂದಿಯ ಪೈಕಿ 90.7%ನಷ್ಟು ಜನರಿಗೆ ಕನಿಷ್ಠ ಒಂದು ಲಸಿಕೆ ಹಾಗೂ 83.5% ಮಂದಿಗೆ ಎರಡೂ ಲಸಿಕೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...